ಕುಶಾಲನಗರ, ಮಾ. 31: ಪ್ರತಿಯೊಬ್ಬರಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಉತ್ತಮ ಸಂಬಂಧ ವೃದ್ಧಿಸಿಕೊಂಡಾಗ ಮಾತ್ರ ಬದುಕಿಗೆ ಅರ್ಥ ಲಭಿಸಲು ಸಾಧ್ಯ ಎಂದು ಚಿಂತಕ ಮೂಡಬಿದಿರೆಯ ಅರವಿಂದ ಚೊಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಕಾರಾತ್ಮಕ ಆಲೋಚನಾ ಕ್ರಮವನ್ನು ಕೈಬಿಡಬೇಕಿದೆ.

ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ಸು ಲಭಿಸಲು ಸಾಧ್ಯ ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ನಡೆಯಿತು.

ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಿ.ಕೆ. ಸುಗುರಾಜ್, ಕಾಲೇಜು ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ. ಬಿ.ಡಿ. ಹರ್ಷ, ಕ್ಷೇಮಪಾಲನಾ ಅಧಿಕಾರಿ ಪಿ.ಟಿ. ಕಾಶೀಕುಮಾರ್, ಸಾಂಸ್ಕøತಿಕ ಸಮಿತಿ ಸಂಚಾಲಕಿ ವಸಂತಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕಿ ಐ.ಕೆ. ಪೂವಮ್ಮ, ರೆಡ್‍ಕ್ರಾಸ್ ಸಂಚಾಲಕ ರಮೇಶ್‍ಚಂದ್ರ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಟಿ.ಎಂ. ಸುಧಾಕರ್, ಎ. ಪಾವನಿ, ರೇಂಜರ್ಸ್ ಘಟಕ ಸಂಚಾಲಕಿ ಮಧುಶ್ರೀ, ಅಧೀಕ್ಷಕಿ ಮೀನಾಕ್ಷಿ, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಸಿ.ಎಸ್. ಜನಾರ್ಧನ್, ಕಾರ್ಯದರ್ಶಿ ಹೆಚ್.ಆರ್. ಮನೋಜ್ ಮತ್ತಿತರರು ಇದ್ದರು.

ವಿದ್ಯಾರ್ಥಿನಿ ಚೈತ್ರಾ ಪ್ರಾರ್ಥಿಸಿದರು, ಅಶ್ವಿನಿ ಸ್ವಾಗತಿಸಿ ಲವ್ಯ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.