ಚೆಟ್ಟಳ್ಳಿ, ಮಾ. 31: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ (ಎಸ್.ಎಸ್.ಎಫ್.) ವೀರಾಜಪೇಟೆ ಶಾಖೆ ವತಿಯಿಂದ ಪಿ.ಯು.ಸಿ. ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿಚಾರಗೋಷ್ಠಿ ವೀರಾಜಪೇಟೆಯ ಅನ್ವಾರುಲ್ ಹುದಾ ಕ್ಯಾಂಪಸ್‍ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಯ್ಯದ್ ಖಾತಿಂ ತಂಙಳ್ ಎಮ್ಮೆಮಾಡು ಅವರು ಪ್ರಾರ್ಥನೆ ನೆರವೇರಿಸಿದರು. ವೀರಾಜಪೇಟೆ ಶಾಖೆ ಅಧ್ಯಕ್ಷ ಝುಬೈರ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಉದ್ಘಾಟಿಸಿದರು. ಮುರ್ಷಿದ್ ಅದಾನಿ ಕೊಟ್ಟಮುಡಿ ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಯಾಕೂಬ್ ಮಾಸ್ಟರ್ ಕೊಳಕೇರಿ ಅವರನ್ನು ಸನ್ಮಾನಿಸ ಲಾಯಿತು. ಈ ಸಂದರ್ಭ ವೀರಾಜಪೇಟೆ ಶಾಖೆ ಕಾರ್ಯದರ್ಶಿ ಯೂಸುಫ್ ಝೈನಿ, ಕೊಡಗು ಜಿಲ್ಲಾ ಅಧ್ಯಕ್ಷ ಅಝೀಝ್ ಸಖಾಫಿ, ಕಾರ್ಯದರ್ಶಿ ಮುಸ್ತಫ, ನೆಲ್ಲಿಹುದಿಕೇರಿ ಶಾಖೆ ಪದಾಧಿಕಾರಿ ಗಳಾದ ರಝಾಕ್ ಸಅದಿ, ನಲ್ವತ್ತೆಕ್ರೆ. ರಿಯಾಸ್, ಗುಹ್ಯ ಜಲಾಲುದ್ದೀನ್ ಮುಸ್ಲಿಯಾರ್, ಜಲೀಲ್ ಅಮೀನಿ, ರಶೀದ್ ಕಂಡಕರೆ ಇನ್ನಿತರರು ಹಾಜರಿದ್ದರು.