ಗೋಣಿಕೊಪ್ಪ ವರದಿ, ಮಾ. 31: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಾನಂಡ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ ಸಮಾಜದ ಸಭಾಂಗಣ ದಲ್ಲಿ ಅನಾವರಣಗೊಳಿಸಲಾಯಿತು. ಸಮಾಜ ಹಾಗೂ ಕುಟುಂಬದ ಸಹಯೋಗದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ಕ್ರಿಕೆಟ್ ಕಪ್ ಲಾಂಛನವನ್ನು ಪ್ರಮುಖರುಗಳು ಬಿಡುಗಡೆಗೊಳಿಸಿದರು. ಈ ಸಂದರ್ಭ ಬಾನಂಡ ಕುಟುಂಬ ಹಾಗೂ ಅಖಿಲ ಅಮ್ಮಕೊಡವ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.ಬಾನಂಡ ಕ್ರಿಕೆಟ್ ಕಪ್ ಅಧ್ಯಕ್ಷ ಬಾನಂಡ ಅಪ್ಪಣಮಯ್ಯ, ಉಪಾಧ್ಯಕ್ಷ ಬಾನಂಡ ನಂಜುವಮಯ್ಯ, ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು, ಬಾನಂಡ ಕ್ರಿಕೆಟ್ ಕಪ್‍ಗೆ ಸಮಾಜದಿಂದ ರೂ. 1 ಲಕ್ಷ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಬಾನಂಡ ಪ್ರಥ್ಯು ಮಾತನಾಡಿ, ಮಾಯಮುಡಿ ಗ್ರಾಮದಲ್ಲಿ ಕ್ರಿಕೆಟ್ ಆಯೋಜಿಸಿರುವದರಿಂದ ನಮ್ಮ ಕುಟುಂಬದವರು ಹಾಗೂ ಹೆಚ್ಚಿನ ಅಮ್ಮಕೊಡವರು ಹಾಗೂ ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಶಾಲಾ ಮೈದಾನ ವನ್ನು ರೂ. 2 ಲಕ್ಷ ಅನುದಾನದಲ್ಲಿ ದುರಸ್ತಿ ಪಡಿಸಲಾಗಿದೆ. ಮೇ 4-5 ರಂದು ಕ್ರಿಕೆಟ್ ನಡೆಯಲಿದೆ ಎಂದರು.ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಮನ್ನಕಮನೆ ರಾಜು, ಕಾರ್ಯದರ್ಶಿ ಪುತ್ತಮನೆ ಅನಿಲ್, ನಿರ್ದೇಶಕ ಹೆಮ್ಮಚ್ಚಿಮನೆ ರವಿ, ಬಾನಂಡ ಕ್ರಿಕೆಟ್ ಕಪ್ ಸಮಿತಿ ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ಸುದನ್ ಉಪಸ್ಥಿತರಿದ್ದರು.