ಗೋಣಿಕೊಪ್ಪಲು.ಮಾ.31: ಕರ್ನಾಟಕದಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರದ ವಿಕಾಸವನ್ನು ರಾಜ್ಯದ ಮುಖ್ಯಮಂತ್ರಿ ತಮ್ಮದೆಂದು ಪ್ರಚಾರ ಪಡೆಯುತ್ತಿದ್ದಾರೆÉ. ರಾಜ್ಯದಲ್ಲಿ ನಡೆದ ಐಟಿ ದಾಳಿಯಿಂದ ಜನತೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಕಪ್ಪು ಹಣವನ್ನು ಶೇಖರಿಸಿ ದೇಶದ ಆರ್ಥಿಕತೆಗೆ ಕನ್ನ ಹಾಕುತ್ತಿದ್ದ ಗುತ್ತಿಗೆದಾರರ ಸಮರ್ಥನೆ ಮಾಡುವ ಮೂಲಕ ಜನತೆಗೆ ತಮ್ಮ ನಿಜವಾದ ಬಣ್ಣವನ್ನು ತಿಳಿಸಿದ್ದಾರೆ. ಭ್ರಷ್ಟ ಗುತ್ತಿಗೆದಾರರ ಪರ ನಿಂತು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡ ಸರ್ಕಾರದಿಂದ ಜನರು ಏನನ್ನು ನಿರೀಕ್ಷಿಸಲು ಸಾಧ್ಯ. ಮುಖ್ಯಮಂತ್ರಿ ಹಾಗೂ ಗುತ್ತಿಗೆದಾರರಿಗೆ ಏನು ಸಂಬಂಧ? ಜೊತೆಗೆ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಜಗಳ ಮುಂದುವರಿದಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ, ಬಿಜೆಪಿ ರಾಷ್ಟ್ರೀಯ ನಾಯಕಿ ಸ್ಮøತಿ ಇರಾನಿ ಛೇಡಿಸಿದರು. ಗೋಣಿಕೊಪ್ಪಲುವಿನ ಸರ್ಕಾರಿ ಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿ.ಜೆ.ಪಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‍ಸಿಂಹ ಅವರ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು.ಫೀ. ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅಂತಹ ಮಹಾಪುರುಷರು ಜನಿಸಿರುವ ಪುಣ್ಯಭೂಮಿಯಲ್ಲಿ ನಿಂತು ಮಾತನಾಡುವದಕ್ಕೆ ಪುಣ್ಯ ಮಾಡಿದ್ದೇನೆ. ಇಂತಹಾ ಪುಣ್ಯ ಭೂಮಿಯಲ್ಲಿ ಜನಿಸಿರುವ ಜನರ ಕೂಗು ದೇಶದೆಲ್ಲೆಡೆ ಮತ್ತೆ ಮೊಳಗಬೇಕು ಎಂದರು.

ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಶ್ರೀ ರಾಮನ ಅಸ್ತಿತ್ವವೇ ಇಲ್ಲ ಎಂದು ನ್ಯಾಯಾಲ ಯಕ್ಕೆ “ಅಫಿಡವಿಟ್” ನೀಡಿತ್ತು. ಆದರೆ ಇದೀಗ ರಾಹುಲ್ ಗಾಂಧಿ ಮತ್ತೆ ರಾಮಜಪ ಮಾಡುತ್ತಿದ್ದಾರೆ. ಈ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು. ವಿದೇಶ ಪ್ರವಾಸದಲ್ಲಿ ತಲ್ಲೀನರಾಗಿದ್ದ ಒಂದು ಪಕ್ಷದ ನಾಯಕರು ಮೋದಿಯ ಭಯದಿಂದ ಗಂಗಾ ದರ್ಶನ ಮಾಡುವ ಹಂತಕ್ಕೆ ಬಂದಿದ್ದಾರೆ.. ಆದರೆ ಅಯೋಧ್ಯೆ ವಿಷಯ ಬಂದಾಗ ಮೌನ ವಹಿಸುವ ಕಾಂಗ್ರೆಸ್ ನಾಯಕರಿಗೆ ನೈಜ ಭಕ್ತಿ ಎಲ್ಲಿದೆ? ಎಂದು ಪ್ರಶ್ನಿಸಿದರು.

ಯೋಧರ ಬಗ್ಗೆ ತಾತ್ಸಾರ

ಸೈನಿಕರು ಗಡಿಯಲ್ಲಿ ನಿರಂತರ ದೇಶ ರಕ್ಷಣೆ ಮಾಡುತ್ತಿದ್ದಾರೆ. ಸೈನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮೋದಿ ಮಾಡಿದ್ದಾರೆ. ದೇಶದ ರಕ್ಷಣೆಯ ಹೊಣೆ ಹೊತ್ತ ಸೇನಾ ಪಡೆಗಳ ಬಾಳಾಕೋಟ್ ಕಾರ್ಯಾಚರಣೆಗೆ ಸಾಕ್ಷಿ ಕೇಳಿದ ವಿಪಕ್ಷ ನಾಯಕರು ಮುಂದೆ ಆಡಳಿತ ನಡೆಸುವಂತಹ ಸಂದರ್ಭದÀ ಸರ್ಕಾರÀ ಬೇಕಾಗಿದೆಯೆ ಎಂಬ ಪ್ರಶ್ನೆಯನ್ನು ಮತದಾರರು ತಮ್ಮನ್ನು ಕೇಳಿಕೊಳ್ಳಬೇಕಿದೆ ಎಂದು ಸಚಿವರು ವಿಮರ್ಶಿಸಿದರು.

ಪ್ರಧಾನ ಮಂತ್ರಿಗಳ ಜನಧನ್ ಯೋಜನೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಜನಧನ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಸಂದರ್ಭ ಬ್ಯಾಂಕುಗಳು ಬಹುತೇಕ ಮಂದಿಗೆ ಬ್ಯಾಂಕ್ ಖಾತೆಯಿಲ್ಲ ಎಂಬ ಉತ್ತರ ನೀಡಿದ್ದವು. ಆದರೆ ಪ್ರಸ್ತುತ ಪ್ರಧಾನಮಂತ್ರಿಗಳ ಪ್ರಯತ್ನದಿಂದಾಗಿ ಐದು ವರ್ಷದಲ್ಲಿ 30 ಕೋಟಿ ಖಾತೆಗಳನ್ನು ತೆರೆÀಯಲಾಗಿದೆ. ಕರ್ನಾಟಕದಲ್ಲಿ 1 ಕೋಟಿ 40 ಲಕ್ಷ ಖಾತೆ ತೆರೆಯಲಾಗಿದೆ. ಸಾಮಾನ್ಯ ಪ್ರಜೆ ಬ್ಯಾಂಕ್‍ಗೆ ತೆರಳಲು ಸಾಧ್ಯವಿರಲಿಲ್ಲ. ಮೋದಿ ಅವರ ಜನಧನ್ ಯೋಜನೆಯ ಫಲವಾಗಿ ಸಮಾಜದ ಕಟ್ಟಕಡೆಯ ಪ್ರಜೆಯು ಕೂಡ ಇಂದು ಬ್ಯಾಂಕ್ ಮೆಟ್ಟಿಲು ಹತ್ತುವಂತಾಗಿದೆ ಎಂದರು.

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮೂಲಕ ಕ್ರಾಂತಿ ಮಾಡಿದ್ದಾರೆ. ಸುಮಾರು 8 ಕೋಟಿ ನಕಲಿ ಖಾತೆಗಳನ್ನು ಬಂದ್ ಮಾಡಲಾಗಿದೆ. ಲೂಟಿಕೋರರ ಆಟವನ್ನು

(ಮೊದಲ ಪುಟದಿಂದ) ಮೋದಿ ಮುಗಿಸಿದ್ದಾರೆ. ನಕಲಿ ಖಾತೆಗಳಿಂದ ಯಾರಿಗೆ ಲಾಭವಾಗಿದೆ ಎಂಬ ಸತ್ಯ ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು.

ಮಹಿಳೆಯರಿಗೆ ಅನುಕೂಲ

ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡಿದ ಸಂದರ್ಭ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಮಹಿಳೆಯರು ಪಡುತ್ತಿರುವ ಕಷ್ಟದ ಅರಿವಾಗಿದೆ. ಹೊಗೆ ತುಂಬಿದ ಅಡುಗೆ ಮನೆಗಳಲ್ಲಿ ಅಡುಗೆ ಮಾಡುವ ಮಹಿಳೆಯರ ಕಷ್ಟದ ಮನದಟ್ಟಾಯಿತು. ಇದೇ ಕಾರಣಕ್ಕೆ ಪ್ರಧಾನಮಂತ್ರಿಗಳು ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಮಹಿಳೆಯರ ಆರೋಗ್ಯದಲ್ಲಿ ಬೆಳವಣಿಗೆಯಾಗಿದೆ. ಉಜ್ವಲ ಯೋಜನೆ ಫಲಾನುಭವಿಗಳು ದೇಶದಲ್ಲಿ 7 ಕೋಟಿ ಇದ್ದಾರೆ. 28 ಲಕ್ಷ ಜನ ಕರ್ನಾಟಕದಲ್ಲಿ ಉಪಯೋ ಗವನ್ನು ಪಡೆÉದು ಕೊಂಡಿದ್ದಾರೆ ಎಂದು ಮಾಹಿತಿಯಿತ್ತರು.

ದೇಶದಾದ್ಯಂತ 9 ಕೋಟಿ ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿ ಕ್ರಾಂತಿ ಮಾಡಲಾಗಿದೆ. ಕರ್ನಾಟಕದಲ್ಲಿ 45 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬಯಲಿನಲ್ಲಿ ಶೌಚಕ್ಕೆ ಹೋಗಲು ಮುಜುಗರ ಪಡುತ್ತಿದ್ದ ಮಹಿಳೆಯರು ಇಂದು ಹೆಮ್ಮೆಯಿಂದ ಶೌಚಾಲಯ ವನ್ನು ಉಪಯೋಗಿಸುತ್ತಿದ್ದಾರೆ. ರಾಜಕಾರಣದಲ್ಲಿ ತೊಡಗಿಸಿ ಕೊಂಡಿರುವ ಕುಟುಂಬ ಮಾಡಲು ಸಾಧ್ಯವಾಗದಿರುವ ಕಾರ್ಯವನ್ನು ಮೋದಿ ಏಕಾಂಗಿಯಾಗಿ ಮಾಡಿ ತೋರಿಸಿದ್ದಾರೆ ಎಂದರು.

ಕಾಮ್‍ದಾರ್- ನಾಮ್‍ದಾರ್

ಚುನಾವಣೆಯಲ್ಲಿ ಈ ಬಾರಿ ಕಾಮ್‍ದಾರ್ (ಅಂದರೆ ಕೆಲಸ ಮಾಡುವ) ಪಕ್ಷಕ್ಕೆ ಮತವನ್ನು ಒತ್ತುವ ನಿರ್ಣಯವನ್ನು ಜನತೆ ಕೈಗೊಂಡಿದ್ದಾರೆ. ನಾಮ್‍ದಾರ್ ಅಂದರೆ ಕೇವಲ ಕುಟುಂಬದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಂದಿರುವವರಿಗೆ ಚುನಾವಣೆಯಲ್ಲಿ ಸೋಲು ಖಚಿತ ಎಂದು ಹೇಳಿದರು.

ಸಂಸದ ಪ್ರತಾಪ್‍ಸಿಂಹ ಅವರ ಪ್ರತಾಪ ಇಲ್ಲಿ ಚೆನ್ನಾಗಿದೆ, ರೀನಾ ಪ್ರಕಾಶ್ ಅಂತಹವರ ಸೇವೆಯೂ ಸ್ಮರಣೀಯ ಎಂದು ಸಚಿವರು ನುಡಿದರು. ರಾಷ್ಟ್ರದ ವಿಕಾಸ ಹಾಗೂ ನಾಗರಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮೋದಿ ಸರಕಾರ ಮತ್ತೊಮ್ಮೆ ಬರಬೇಕಿದೆ. ಮೋದಿ ಆಡಳಿತ ನೀತಿ ವಿಶ್ವದೆಲ್ಲೆಡೆ ಭಾರತದ ವರ್ಚಸ್ಸನ್ನು ಉತ್ತುಂಗಕ್ಕೆ ಏರುವಂತೆ ಮಾಡಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಸ್ಥಾನಮಾನದ ಅರಿವು ದೇಶದ ಪ್ರತಿಯೊಬ್ಬ ಪ್ರಜೆಗೆ ಇಷ್ಟು ವರ್ಷಗಳಲ್ಲಿ ಮನವರಿಕೆ ಯಾಗಿದೆ. ಸಂಘಟನೆ ಮೂಲಕ ರಾಷ್ಟ್ರವನ್ನು ಸಂಪನ್ನವಾಗಿಸಲು ಮೋದಿ ಪಣ ತೊಟ್ಟಿದ್ದಾರೆ ಮತ್ತು ಸಂಪೂರ್ಣವಾಗಿ ತೊಡಗಿಸಿ ಕೊಂಡಿ ದ್ದಾರೆ. ಬಹಳಷ್ಟು ಯೋಜನೆಗಳನ್ನು ಪ್ರಧಾನಮಂತ್ರಿಗಳು ಜಾರಿಗೆ ತಂದಿರುವ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಕಡ್ಡಾಯವಾಗಿ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡಂತೆ ಅಭಿವೃದ್ಧಿಯ ಕಡೆಗೆ ಕೆಲಸಮಾಡು ವದು ನಮ್ಮ ಗುರಿ. ಬಡವರ ಹಾಗೂ ಮಧ್ಯಮ ವರ್ಗ ಜನರ ಉನ್ನತಿಗಾಗಿ ಬದ್ದರಾಗಿದ್ದೇವೆ ಎಂದು ಹೇಳಿದರು. “ಪೋಲಿಂಗ್ ಬೂತ್‍ಜಾಯೇಗಾ, ಕಮಲ್ ಬಟನ್ ದಬಾಯೆಗಾ, ಫಿರ್ ಮೋದಿಕೋ ಪ್ರಧಾನ್‍ಮಂತ್ರಿ ಬನಾಯೆಗಾ” ಎನ್ನುವ ಮಾತಿನ ಮೂಲಕ ಸಚಿವರು ತಮ್ಮ ಮಾತು ಮುಗಿಸಿದರು.

ಪ್ರಚಾರ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಪ್ರಾಸ್ತಾವಿಕ ಭಾಷಣ ಮಾಡಿ, ದೇಶವು ಅಖಂಡ ಭಾರತವಾಗಿ ಉಳಿಯಬೇಕೆಂದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಾಟಕ ಜನರಿಗೆ ತಿಳಿದಿದೆ. ಮೈತ್ರಿ ಸರ್ಕಾರದ ನಾಟಕಕ್ಕೆ ತಕ್ಕ ಪಾಠ ಕಲಿಸುವಂತಾಗಬೇಕು ಎಂದರು. ಸ್ಮøತಿ ಇರಾನಿ ಅಮೇಥಿ ಯಲ್ಲಿ ಸ್ಪರ್ಧೆಗೆ ಇಳಿದಿರುವದಕ್ಕೆ ಭಯಗೊಂಡು ರಾಹುಲ್‍ಗಾಂಧಿ ಅವರು ವಯನಾಡುವಿನಲ್ಲಿ ಚುನಾವಣೆಗೆ ಸ್ಪರ್ಧಿಸುವಂತಾಗಿದೆ. ಅಲ್ಲಿ ಕಾಂಗ್ರೆಸಿಗರೇ ಅವರಿಗೆ ಪಾಠ ಕಲಿಸುತ್ತಾರೆ ಎಂದರು. ಸಭೆಯಲ್ಲಿ ಸಂಸದ ಪ್ರತಾಪ್‍ಸಿಂಹ ಅವರು ಪ್ರಧಾನಿ ನರೇಂದ್ರಮೋದಿ ಅವರು ಜಾರಿಗೆ ತಂದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾವೇರಿ ಕಾಲೇಜಿನಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 12:35ಕ್ಕೆ ಆಗಮಿಸಿದ ಕೇಂದ್ರ ಮಂತ್ರಿ ಸ್ಮøತಿ ಇರಾನಿಯವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ರೀನಾ ಪ್ರಕಾಶ್,ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಹಿಳಾ ಮೋರ್ಚ ಅಧ್ಯಕ್ಷೆ ಯಮುನಾ ಚಂಗಪ್ಪ, ಬಿ.ಜೆ.ಪಿ ಮುಖಂಡರಾದ ಮಂಡೇಪಂಡ ಸುಜಾ ಕುಶಾಲಪ್ಪ, ಕಾಡ್ಯಮಾಡ ಗಿರೀಶ್‍ಗಣಪತಿ, ಮಲ್ಚೀರ ಗಾಂಧಿ ದೇವಯ್ಯ, ಆದೇಂಗಡ ವಿನು ಚಂಗಪ್ಪ, ಗುಮ್ಮಟ್ಟೀರ ಕಿಲನ್ ಗಣಪತಿ, ಮುಂತಾದವರು ಹೂ ಗುಚ್ಚ ನೀಡಿ ಬರಮಾಡಿಕೊಂಡರು. ಬಳಿಕ ಸಿ.ಕೆ ಬೋಪಣ್ಣ ಅವರ ಮನೆಯಲ್ಲಿ ಭೋಜನ ಮುಗಿಸಿದ ಸಚಿವರು 2:30ಕ್ಕೆ ಹೆಲಿಕಾಪ್ಟರ್‍ನ ಮೂಲಕ ಪ್ರಚಾರ ಸಭೆಗೆ ಕೋಲಾರದತ್ತ ಪ್ರಯಾಣ ಬೆಳೆಸಿದರು.

ಡಿ.ವೈ.ಎಸ್.ಪಿ ನಾಗಪ್ಪ ನೇತೃತ್ವದಲ್ಲಿ ಇಬ್ಬರು ಡಿ.ವೈ.ಎಸ್.ಪಿ, ಐವರು ಸಿ.ಪಿ.ಐ, 8 ಮಂದಿ ಎ.ಎಸ್.ಐ, 25 ಮಹಿಳಾ ಸಿಬ್ಬಂದಿ, 150 ಪೋಲಿಸ್ ಸಿಬ್ಬಂದಿ ಸಹಿತ 1 ಕೆ.ಎಸ್.ಆರ್.ಪಿ.ಅಗ್ನಿಶಾಮಕದಳ, ಡಿ.ಆರ್ ತುಕಡಿಗಳನ್ನು ಬಂದೋ ಬಸ್ತಿಗೆ ಬಳಸಲಾಗಿತ್ತು.

- ಹೆಚ್.ಕೆ.ಜಗದೀಶ್, ಎನ್.ಎನ್. ದಿನೇಶ್, ಸುದ್ದಿಪುತ್ರ