ಸೋಮವಾರಪೇಟೆ, ಮಾ.31: ತಲ್ತರೆಶೆಟ್ಟಳ್ಳಿ ವಿವೇಕಾನಂದ ಗ್ರಾಮಾಭಿವೃದ್ಧಿ ಸಮಿತಿ, ಬೆಂಗಳೂರಿನ ಶಾರದ ಪ್ರತಿಷ್ಠಾನ, ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗ ಇವುಗಳ ಆಶ್ರಯದಲ್ಲಿ ಏ. 7ರಂದು ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ವೀರಯೋಧರಿಗೆ ಶ್ರದ್ಧಾಂಜಲಿ ಮತ್ತು ಮಾಜೀ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ ಕಾಳಪ್ಪ ತಿಳಿಸಿದ್ದಾರೆ.
ಏಪ್ರಿಲ್ 7ರಂದು ಪೂರ್ವಾಹ್ನ 10 ಗಂಟೆಗೆ ತಲ್ತರೆಶೆಟ್ಟಳ್ಳಿಯ ನವರತ್ನ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಂತಳ್ಳಿ, ಅಭಿಮಠ ಬಾಚಳ್ಳಿ, ತಲ್ತರೆಶೆಟ್ಟಳ್ಳಿ ಮತ್ತು ಹರಗ ಗ್ರಾಮ ವ್ಯಾಪ್ತಿಯ 9 ಮಂದಿ ನಿವೃತ್ತ ಯೋಧರನ್ನು ಸನ್ಮಾನಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.