ಗುಡ್ಡೆಹೊಸೂರು, ಮಾ. 31: ಇತ್ತೀಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ (ಜಿ.ಕೆ.ವಿ.ಕೆ)ದಲ್ಲಿ ನಡೆದ 53ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರ ನಿವಾಸಿ ಹೊಸೊಕ್ಲು ಕುಶನ್ ಕುಶಾಲಪ್ಪ ಅವರು ಕೃಷಿ ವಿಜ್ಞಾನ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರು ಕುಶಾಲನಗರದ ವಿಜಯ ಬ್ಯಾಂಕ್ ಉದ್ಯೋಗಿ ಹೊಸೊಕ್ಲು ಲಿಂಗರಾಜು ಮತ್ತು ನೆಲ್ಲಿಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಉದ್ಯೋಗಿ ನಿರ್ಮಲ ದಂಪತಿಯ ಪುತ್ರ.