ಗೋಣಿಕೊಪ್ಪಲು, ಮಾ. 29: ಕೇಂದ್ರ ಜವಳಿ ಖಾತೆ ಸಚಿವೆ ಸ್ಮ್ರತಿ ಇರಾನಿ ಅವರು ತಾ.31 ರಂದು ಮೈಸೂರು ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿ ಸಲಿದ್ದು, ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪೂರ್ವಭಾವಿ ಸಿದ್ಧತಾ ಕಾರ್ಯ ಆರಂಭಗೊಂಡಿದೆ.ಮೈದಾನದ ಸಮೀಪವೇ ಇರುವ ಕಾವೇರಿ ಕಾಲೇಜು ವಿದ್ಯಾ ಸಂಸ್ಥೆಗೆ ಸೇರಿದ ನಿವೇಶನದಲ್ಲಿ ವಾಹನ ನಿಲುಗಡೆಗಾಗಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕಾರ್ಯ ಆರಂಭಗೊಂಡಿದೆ. ಇಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಮೈದಾನಕ್ಕೆ ಆಗಮಿಸಿ ಪೂರ್ವ ಸಿದ್ಧತೆ ಬಗ್ಗೆ ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಪ್ರಮುಖರಾದ ಕೆ.ಬಿ.ಗಿರೀಶ್ ಗಣಪತಿ, ಎಪಿಎಂಸಿ ಸದಸ್ಯ ಕಿಲನ್ ಗಣಪತಿ ಮುಂತಾದವ ರೊಂದಿಗೆ ಮಾತುಕತೆ ನಡೆಸಿದರು.

ಇದೇ ಸಂದರ್ಭ ಗೋಣಿ ಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ವಸಂತ್ ಮತ್ತು ಪೊಲೀಸ್ ಉ¥ Àನಿರೀಕ್ಷಕ ಶ್ರೀಧರ್ ಅವರಿಗೆ ಕೇಂದ್ರ ಸಚಿವೆ ಆಗಮನ ಕುರಿತು ಖಚಿತ ಪಡಿಸಿದರು.ಸ್ಮ್ರತಿ ಇರಾನಿ ಅವರು ಅಂದು 11.30 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಕಾವೇರಿ ಕಾಲೇಜಿನ ಮೈದಾನಕ್ಕೆ ಆಗಮಿಸಿ ಬಳಿಕ ವಾಹನದಲ್ಲಿ ಪ್ರಾಥಮಿಕ ಶಾಲಾ ಮೈದಾನಕ್ಕೆ ಆಗಮಿಸಲಿದ್ದಾರೆ.

ಅಪರಾಹ್ನ ಮೈಸೂರಿನಲ್ಲಿಯೂ ಬಹಿರಂಗ ಸಭೆಯಲ್ಲಿ ಅವರು ಪ್ರಚಾರ ಭಾಷಣ ಮಾಡಲಿದ್ದು, ಗೋಣಿ ಕೊಪ್ಪಲಿನಿಂದ

(ಮೊದಲ ಪುಟದಿಂದ) ಮೈಸೂರಿಗೆ ಮತ್ತೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮುಂದುವರಿಸಲಿದ್ದಾರೆ.

ಶಾಲಾ ಮೈದಾನದಲ್ಲಿ ಸುಮಾರು 5000 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಬೋಪಯ್ಯ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ, ಟಿ.ವಿ. ಶೋ ಮೂಲಕ ಸ್ಮøತಿ ಇರಾನಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೆಚ್ಚಿನ ವಾಹನ ನಿಲುಗಡೆಗಾಗಿ ಗೋಣಿಕೊಪ್ಪಲು ಪ್ರೌಢ ಶಾಲಾ ಮೈದಾನದಲ್ಲಿಯೂ ವ್ಯವಸ್ಥೆ ಮಾಡಲಾಗಿರುವದಾಗಿ ಪೊಲೀಸ್ ಉಪನಿರೀಕ್ಷಕ ಬಿ.ಎಸ್.ಶ್ರೀಧರ ತಿಳಿಸಿದ್ದಾರೆ.

ಜಿ.ಪಂ. ಸದಸ್ಯ ಸಿ.ಕೆ.ಬೋಪಣ್ಣ ಮತ್ತು ತಂಡವು ಚುನಾವಣಾ ಪ್ರಚಾರ ಭಾಷಣ ಕಾರ್ಯಕ್ರಮದ ಮೇಲುಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದೆ.

- ಟಿ.ಎಲ್.ಎಸ್. / ಎನ್.ಎನ್.ಡಿ.