ಮಡಿಕೇರಿ, ಮಾ. 30: ಲೋಕಸಭಾ ಚುನಾವಣಾ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ ಮತ್ತು ಪೋಲಿಸ್ ವೀಕ್ಷಕರಾದ ಡಾ.ವಿಕಾಸ್ ಪಾಠಕ್ ಅವರು ಶನಿವಾರ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆ ಕೇಂದ್ರಗಳು ಮತ್ತು ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸಂತ ಜೋಸೆಫರ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿ ಹಾಗೂ ಮತಗಟ್ಟೆ ಭೇಟಿ ನೀಡಿ ಪರಿಶೀಲಿಸಿದರು. ವೀರಾಜಪೇಟೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಿದರು. ಬಳಿಕ ಗೋಣಿಕೊಪ್ಪ, ಶ್ರೀಮಂಗಲ, ಬಿರುನಾಣಿ ಮತ್ತಿತರ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಕುಟ್ಟ ಚೆಕ್‍ಪೋಸ್ಟ್‍ಗೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ, ಉಪ ಪೋಲಿಸ್ ವರಿಷ್ಠಾಧಿಕಾರಿಗಳಾದ ಸುಂದರ ರಾಜ್, ನಾಗಪ್ಪ, ಚುನಾವಣಾ ವೀಕ್ಷಕರ ನೋಡಲ್ ಅಧಿಕಾರಿಗಳಾದ ನಟರಾಜು, ಪ್ರಮೋದ್ ಇತರರು ಇದ್ದರು.