ಕುಶಾಲನಗರ, ಮಾ. 30: ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಹೊಟೇಲ್‍ಗಳಿಗೆ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ ಬಗ್ಗೆ ವರದಿಯಾಗಿದೆ.

ಮೈಸೂರಿನಿಂದ ಆಗಮಿಸಿದ ಸರಕು ಸೇವಾ ತೆರಿಗೆ ಅಧಿಕಾರಿಗಳ ತಂಡ ಕಳೆದ 1 ವಾರದಿಂದ ಕುಶಾಲನಗರ, ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ ವ್ಯಾಪ್ತಿಯ ಹೊಟೇಲ್‍ಗಳಿಗೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಹಲವು ಹೊಟೇಲ್‍ಗಳಿಂದ ದಾಖಲೆಗಳನ್ನು ಸಂಗ್ರಹಿಸಿರುವ ತೆರಿಗೆ ಅಧಿಕಾರಿಗಳು ಜಿಎಸ್‍ಟಿ ಪಾವತಿಸದ ಹೊಟೇಲ್ ಮಾಲೀಕರಿಗೆ ದಂಡ ವಿಧಿಸಿರುವದಾಗಿ ತಿಳಿದು ಬಂದಿದೆ. ಪ್ರಕೃತಿ ವಿಕೋಪದಿಂದ ಬಸವಳಿದಿರುವ ಜಿಲ್ಲೆಯ ಹೊಟೇಲ್ ಉದ್ಯಮಿಗಳಿಗೆ ಈ ದಾಳಿ ಸಂಕಷ್ಟಕ್ಕೆ ಈಡು ಮಾಡಿದ್ದು, ಮಾಲೀಕರು ಉಸ್ತುವಾರಿ ಸಚಿವರ ಮೊರೆ ಹೋಗಿರುವದಾಗಿ ತಿಳಿದುಬಂದಿದೆ.