ಚೆಟ್ಟಳ್ಳಿ, ಮಾ. 30: ಕೊಂಡಂಗೇರಿ ಯಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿ ರುವ ಮರ್ಹೂಂ ಅಸಯ್ಯದ್ ಅಬ್ದುಲ್ಲಾಹಿ ಸಖಾಫ್ ಹಾಗೂ ಪವಾಡ ಪುರುಷರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಸಮಾರೋಪ ಸಮಾರಂಭ ಕಾರ್ಯಕ್ರಮವು; ಸುನ್ನಿ ಮುಸ್ಲಿಂ ಜಮಾಹತ್ ಅಧ್ಯಕ್ಷ ಕೆ.ಕೆ. ಯೂಸುಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಭಾಷಣವನ್ನು ಸಿರಾಜುಲ್ ಹುದಾ ಕುಟ್ಯಾಡಿ ಪ್ರಾಂಶುಪಾಲ ಪೇರೋಡ್ ಅಬ್ದುರಹಮಾನ್ ಸಖಾಫಿ ಮಾಡಿದರು. ಈ ಸಂದರ್ಭ ಜಮಾಅತ್ ವತಿಯಿಂದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ರುವ ಕೆ.ಎ. ಯಾಕೂಬ್ ಅವರನ್ನು ಗೌರವಿಸಲಾಯಿತು. ಉರೂಸ್ ಸಮಾರೋಪ ಸಮಾರಂಭದ ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವೇದಿಕೆಯಲ್ಲಿ ಕೊಂಡಂಗೇರಿ ಮುದರಿಸ್ ಉಮರ್ ಸಖಾಫಿ, ತಕ್ಕ ಮುಖ್ಯಸ್ಥರಾದ ಶಾದುಲಿ ಹಾಜಿ, ಅಹ್ಮದ್ ಹಾಜಿ, ಇಕ್ಬಾಲ್ ಮೊದಲಾದವರು ಇದ್ದರು.