ಚೆಟ್ಟಳ್ಳಿ, ಮಾ. 30: ಶಾಲಾ ಪಠ್ಯ ಮುಗಿದು ಪರೀಕ್ಷೆ ಒತ್ತಡದಿಂದ ಹೊರ ಬರುವ ಮಕ್ಕಳಿಗೆ ಬೇಸಿಗೆಯಲ್ಲಿ ಹಲವು ಅವಕಾಶಗಳು ಕಾಯುತ್ತಿರುತ್ತವೆ. ಹಲವೆಡೆ ಮಕ್ಕಳಿಗೆ ಬಗೆಬಗೆಯ ಬೇಸಿಗೆ ಶಿಬಿರಗಳು ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಿವೆ. ಅದೇ ರೀತಿ ಹೊಸಕೇರಿ ಗ್ರಾಮದ ಐಮಂಡ ರೂಪೇಶ್ ನಾಣಯ್ಯ ಮನೆಯಲ್ಲೆ ಆರ್ಟಿಜೆóನ್ನ್ ಡ್ರಾಯಿಂಗ್ ತರಬೇತಿ ಶಾಲೆಯನ್ನು ಕಳೆದ ಒಂದು ವರ್ಷದಿಂದ ಪ್ರಾರಂಭಿಸಿ ವಾರಕ್ಕೆ ಎರಡು ದಿನ ಪುಟ್ಟಪುಟ್ಟ ಮಕ್ಕಳಿಗೆ ಬಣ್ಣದ ಚಿತ್ತಾರ ಬಿಡಿಸುವ ಕಲೆಯಲ್ಲಿ ತೊಡಗಿದ್ದಾರೆ.

ಪುಟ್ಟ ಕೈಗಳ ಬಣ್ಣಬಣ್ಣದ ಚಿತ್ತಾರಗಳನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಮುಂದೆ ಚಿತ್ರಕಲಾ ಪ್ರದರ್ಶನ ಇಡುವ ಉದ್ದೇಶ ಹೊಂದಿರುವದಾಗಿ ಕಲಾಕಾರ ಹೇಳುತ್ತಾರೆ. ತರಬೇತಿ ಕೇಂದ್ರದಲ್ಲ್ಲಿ ಮಕ್ಕಳಿಂದ ದೊಡ್ಡವರೂ ಚಿತ್ರಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದು, ಹಲವು ಮಕ್ಕಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದÀಕಕ್ಕೆ ಭಾಜನರಾಗಿದ್ದಾರೆ.

- ಕರುಣ್ ಕಾಳಯ್ಯ