ಮಡಿಕೇರಿ, ಮಾ. 29: ಹುದಿಕೇರಿಯ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. 31 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ.

ತಾ. 31 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಧ್ವಜಾರೋಹಣ, ಸಂಜೆ 6.30 ಕ್ಕೆ ಶ್ರೀ ಮುತ್ತಪ್ಪ ತೆರೆ ಬೊಳ್ಳಾಟ, 8.30 ಕ್ಕೆ ಶ್ರೀ ಗುಳಿಗನ ಬೊಳ್ಳಾಟ ನಡೆಯಲಿದೆ.

ಏಪ್ರಿಲ್ 1 ರಂದು ಬೆಳಿಗ್ಗೆ 6 ಗಂಟೆಯಿಂದ ಪೈಂಗುತ್ತಿ ನಡೆಸಲಾಗುವದು. ಸಂಜೆ 8 ಗಂಟೆಯಿಂದ ಮುತ್ತಪ್ಪನ ತೆರೆ, ಶಾಸ್ತಪ್ಪನ ಬೊಳ್ಳಾಟ, 9 ಗಂಟೆಗೆ ಅನ್ನದಾನ, 9.30 ಕ್ಕೆ ವಸರಿಮಲೆ ಅಮ್ಮನ ಅಮೃತ ಸ್ನಾನ, ಚಂಡೆ ಮೇಳ, ನಂತರ ಕಾರಣ ಬೊಳ್ಳಾಟ, ಪೋವಿ ಅಮ್ಮನವರ ಬೊಳ್ಳಾಟ ನಡೆಯಲಿದೆ.

ಏಪ್ರಿಲ್ 2 ರಂದು ಗುಳಿಗನ ತೆರೆ, ಕಾರಣ ತೆರೆ, ಶ್ರೀ ಮುತ್ತಪ್ಪ ತೆರೆ, ತಿರಪ್ಪನ ತೆರೆ, ಶಾಸ್ತಪ್ಪನ ತೆರೆ, ವಸರಿಮಲೆ ಅಮ್ಮನ ತೆರೆ, ಪೋವಿ ತೆರೆ ನಂತರ ಅಪರಾಹ್ನ 12.30 ಗಂಟೆಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.