ಭಾಗಮಂಡಲ, ಮಾ. 30: ಸಾರ್ವಜನಿಕರ ಒಮ್ಮತದ ತೀರ್ಮಾನದೊಂದಿಗೆ ತಲಕಾವೇರಿಯ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏಪ್ರಿಲ್ 5ರಿಂದ 11ರವರೆಗೆ ನಡೆಯಲಿದ್ದು ಜನತೆಯ ಸಹಕಾರ ಅತ್ಯಗತ್ಯ ಎಂದು ಭಾಗಮಂಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಹೇಳಿದರು. ಇಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಬ್ರಹ್ಮಗಿರಿ ಸಪ್ತಋಷಿಗಳ ಕುಂಡಿಕೆ ಸಂರಕ್ಷಣೆ ಹಾಗೂ ಅಭಿವೃದ್ದಿ ಮಾಡುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಅಸಭ್ಯ ವರ್ತನೆ ಮಾಡುವ ಪ್ರವಾಸಿ ಗರಿಗೆ ಕಡಿವಾಣ ಹಾಕಲಾಗುವದು. ಸ್ಥಳದಲ್ಲಿ ದಂಡ ವಿಧಿಸಲಾಗುವದು. ಕಾವೇರಿ ಕ್ಷೇತ್ರ ಇಂದು ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕಾಗಿದೆ. ಭಾಗಮಂಡಲ ಕ್ಷೇತ್ರದಲ್ಲಿ ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿದ್ದು ಮೇ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ದಿನಾಂಕವನ್ನು ನಿಗದಿಪಡಿಸಲಾಗುವದು ಎಂದರು. ಭಾಗಮಂಡಲದ ತಕ್ಷಕ ವನದ ಅಭಿವೃದ್ದಿಯಾಗಬೇಕಿದೆ. ಅಲ್ಲದೆ ನಾಗಪ್ರತಿಷ್ಟಾಪನೆಯಾಗಬೇಕಿದೆ. ಬ್ರಹ್ಮಕಲಶೋತ್ಸವದ ದಿನದಂದು ತಲಕಾವೇರಿಯಲ್ಲಿ ಸಂಸಾರ ಸಹಿತ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಪ್ರಮುಖರಾದ ಕೋಡಿ ಪೊನ್ನಪ್ಪ ಮಾತನಾಡಿ ಭಾಗಮಂಡಲದ ಸಾರ್ವಜನಿಕ ಪ್ರದೇಶದಲ್ಲಿ ಪ್ರವಾಸಿಗರು ಅಡುಗೆ ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ. ಧಾರ್ಮಿಕ ಸ್ಥಳದಲ್ಲಿ ಸಂಪೂರ್ಣ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು. ಎಸ್.ಎಸ್. ಸಂಪತ್‍ಕುಮಾರ್ ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಪೂಜಾ ಕಾರ್ಯಕ್ರಮಕ್ಕೆ ರೂ.2000 ಶುಲ್ಕ ವಿಧಿಸಲಾಗಿದ್ದು ಇದು ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗಲಿದೆ. ಶುಲ್ಕವನ್ನು ರೂ. 500ಕ್ಕೆ ಇಳಿಸುವದು ಒಳಿತು. ಕಲಶಾಭಿಷೇಕ ಪೂಜೆಗೆ ರೂ. 500 ನಿಗದಿಪಡಿಸಿದಲ್ಲಿ ಜನಸಾಮಾನ್ಯರೆಲ್ಲರೂ ಪಾಲ್ಗೊಳ್ಳುತ್ತಾರೆ. ಏಳುದಿನಗಳ ಕಾಲ ತಲಕಾವೇರಿಗೆ ಹೋಗುವವರಿಗೆ ವಾಹನ ಶುಲ್ಕ ವಿಧಿಸಬಾರದು. ಏಳು ದಿನವೂ ಅನ್ನಸಂತರ್ಪಣೆ ನಡೆಸಬೇಕು ಎಂದರು.

ಈ ಸಂದರ್ಭ ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ನಾರಾಯಣಾಚಾರ್, ಸದಸ್ಯರಾದ ಮೀನಾಕ್ಷಿ ಅಣ್ಣಯ್ಯ, ಸಿ. ತಮ್ಮಯ್ಯ, ಸುಭಾಷ್, ಕೆ.ಟಿ. ರಮೇಶ್, ಹಾಗೂ ರವೀಂದ್ರ ಹೆಬ್ಬಾರ್ ಜಗದೀಶ್‍ಕುಮಾರ್ ಮಂಡೀರ ದೇವಿ,ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಳೆಗಾಗಿ ವಿಶೇಷ ಪೂಜೆ: ಇಂದು ಭಾಗಮಂಡಲ ದೇವಾಲಯ ದಲ್ಲಿ ವ್ಯವಸ್ಥಾಪನಾ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾ ಯಿತು. ಭಾಗಮಂಡಲ ವ್ಯಾಪ್ತಿಯಲ್ಲಿ ಇದುವರೆಗೆ ಮಳೆಯಾಗದ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೀ ಡಾಗಿದ್ದು ಉತ್ತಮ ಮಳೆಯಾಗುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.