ಮಡಿಕೇರಿ, ಮಾ. 30: ವೀರಾಜಪೇಟೆ ತಾಲೂಕಿನ ಚೊಂಕಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 50 ಲೀ. ಶೇಂದಿಯನ್ನು ವೀರಾಜಪೇಟೆ ಅಬಕಾರಿ ಉಪ ನಿರೀಕ್ಷಕರು ವಶಪಡಿಸಿಕೊಂಡು ಓರ್ವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮತ್ತು ವೀರಾಜಪೇಟೆ ನಗರದಲ್ಲಿ 7.2 ಲೀ. ಮದ್ಯ ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮದ್ಯದ ಅಂದಾಜು ಮೊತ್ತ ರೂ. 2,603 ಆಗಿರುತ್ತದೆ.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಮಾದ್ರೆ ಗ್ರಾಮದ ಹೂವಯ್ಯ ಅವರ ಮನೆಯಲ್ಲಿ ಅಕ್ರಮವಾಗಿ 20 ಲೀ. ಬೆಲ್ಲದ ಪುಳಗಂಜಿ ಮತ್ತು 1 ಲೀ. ರಾಸಾಯನಿಕ ಪದಾರ್ಥ, 2 ಲೀ. ಕಳ್ಳಭಟ್ಟಿ ಸಾರಾಯಿ ಹಾಗೂ ಇನ್ನಿತರ ವಸ್ತುಗಳನ್ನು ಸೋಮವಾರಪೇಟೆ ಅಬಕಾರಿ ಉಪ ನಿರೀಕ್ಷಕರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.