ಮಡಿಕೇರಿ, ಮಾ. 29: 2019 ಮೈಸೂರು-ಕೊಡಗು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ವಾಹನ ಚಾಲಕರಿಗೆ ಅಂಚೆ ಮೂಲಕ ಮತದಾನ ಮಾಡಲು ನಮೂನೆ 12ನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನೀಡಲಾಗುತ್ತಿದ್ದು, ನಿಯೋಜನೆಗೊಳ್ಳುವ ಖಾಸಗಿ ವಾಹನ ಚಾಲಕರು ತಮಗೆ ನೀಡಿರುವ ಅಧಿಗ್ರಹಣ ಆದೇಶದ ಪ್ರತಿ ಹಾಗೂ ಚುನಾವಣಾ ಗುರುತಿನ ಪ್ರತಿಯೊಂದಿಗೆ ಕಚೇರಿಗೆ ಹಾಜರಾದಲ್ಲಿ, ಅಂಚೆ ಮತದಾನದ ನಮೂನೆ 12 ನ್ನು ನೀಡಿ ಅಂಚೆ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ತಿಳಿಸಿದ್ದಾರೆ.