ಮಡಿಕೇರಿ, ಮಾ. 29: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಏಪ್ರಿಲ್ 6 ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು hಣಣಠಿs://ತಿತಿತಿ.ಟಿvsಚಿಜmissioಟಿಛಿಟಚಿssiv.iಟಿ ವೆಬ್‍ಸೈಟ್ ಮೂಲಕ ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳು hಣಣಠಿs://ತಿತಿತಿ.ಟಿvsಚಿಜmissioಟಿಛಿಟಚಿssiv.iಟಿ ವೆಬ್‍ಸೈಟ್‍ನ್ನು ಒಪನ್ ಮಾಡಿದ ಕೂಡಲೇ ಲಾಗ್‍ಇನ್ ಮಾಡಬೇಕು. ನಂತರ ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‍ವರ್ಡ್ ನಮೂದಿಸಬೇಕು. ಪಾಸ್‍ವರ್ಡ್ ವಿದ್ಯಾರ್ಥಿ, ವಿದ್ಯಾರ್ಥಿನಿಯ ಜನ್ಮ ದಿನಾಂಕವಾಗಿರುತ್ತದೆ. ಆ ಜನ್ಮ ದಿನಾಂಕವನ್ನು ನಮೂದಿಸುವಾಗ ಸಂಖ್ಯೆಗಳನ್ನು ಮಾತ್ರ ಬಳಸಬೇಕು ಮತ್ತು ಸಂಖ್ಯೆಗಳ ಮಧ್ಯದಲ್ಲಿ ಎಲ್ಲಿಯೂ ಸ್ಥಳವನ್ನು ಬಿಡದೆ ಮತ್ತು ಯಾವದೇ ರೀತಿಯ ಸಂಕೇತಗಳನ್ನು ಬಳಸದೆ ನಮೂದಿಸಬೇಕು. ಅನಂತರ ಪ್ರವೇಶಪತ್ರ ಮುದ್ರಣ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಆನ್‍ಲೈನ್ ಅರ್ಜಿ ಪ್ರತಿ ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಒಂದು ವೇಳೆ ಅರ್ಜಿಯಲ್ಲಾಗಲಿ ಅಥವಾ ಪ್ರವೇಶ ಪತ್ರದಲ್ಲಾಗಲಿ ಲೋಪದೋಷಗಳು ಕಂಡುಬಂದಲ್ಲಿ 9448790386, 9731823457, 9482557322 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.