ಮಡಿಕೇರಿ, ಮಾ. 27: ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ತೋಟಂನಲ್ಲಿರುವ ಸತೀಶ್ ಎಂಬವರಿಗೆ ಸೇರಿದ ಲೈನ್ ಮನೆಯಲ್ಲಿ ಭಟ್ಟಿ ಸಾರಾಯಿಯನ್ನು ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ 20 ಲೀ ಬೆಲ್ಲದ ಕೊಳೆ ಹಾಗೂ 3 ಲೀ ಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡು ಆರೋಪಿ ಅಬ್ದುಲ್ಲಾ ಎಂಬಾತನನ್ನು ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ನಿರೀಕ್ಷಕ ಚಂದ್ರಶೇಖರ್ ಎಸ್., ಉಪ ನಿರೀಕ್ಷಕÀ ಜಗನ್ನಾಥ ನಾಯ್ಕ್ ಹಾಗೂ ಸಿಬ್ಬಂದಿ ಕೆ.ಎಸ್.ಉತ್ತಪ್ಪ ಭಾಗವಹಿಸಿದ್ದರು.