ಗುಡ್ಡೆಹೊಸೂರು, ಮಾ. 27: ಇಲ್ಲಿಗೆ ಸಮೀಪದ ರಂಗಸಮುದ್ರದ ವಿರುಪಾಕ್ಷಪುರದ ಶ್ರೀ ಕುರುಂಭ ಭಗವತಿ ದೇವಸ್ಥಾನದ 21ನೇ ವರ್ಷದ ವಾರ್ಷಿಕೋತ್ಸವ ತಾ. 30 ಮತ್ತು 31ರಂದು ನಡೆಯಲಿದೆ.

ತಾ. 30 ರಂದು ಬೆಳಿಗ್ಗೆ 10 ಗಂಟೆಗೆ ಕಲಶ ಅಭಿಷೇಕ, ಪೂರ್ವಾಹ್ನ 11.30 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ. ತಾ. 31 ರಂದು ಬೆಳಿಗ್ಗೆ 6 ಗಂಟೆಗೆ ಉಷಾಪೂಜೆ, ಮಧ್ಯಾಹ್ನ 12 ಗಂಟೆಗೆ ಗುರುಧಿ ದರ್ಪಣಂ ನಂತರ 12.30 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.