ಮಡಿಕೇರಿ, ಮಾ. 27: ಕೂಡಿಗೆಯ ಸದ್ಗುರು ಅಯ್ಯಪ್ಪ ಸ್ವಾಮಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಜಿ. ದೇವಯ್ಯ ವಹಿಸಿದ್ದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿವೇಕಾನಂದ ಶರಣ ಸ್ವಾಮೀಜಿ ಅವರು ಬರೆದು ಕಳುಹಿಸಿದ ಸಂದೇಶಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯೆ ಬೊಳ್ಳಮ್ಮ ಓದಿದರು.
ಆಡಳಿತ ಮಂಡಳಿ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ಮಕ್ಕಳಿಗೆ ಹಿತವಚನ ನೀಡಿದರು. ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಖಜಾಂಚಿ ಎಂ.ಬಿ. ಜಯಂತ್, ಸದಸ್ಯರುಗಳಾದ ಬಿ.ಪಿ. ಅಪ್ಪಣ್ಣ, ಬಿ.ವಿ. ಅರುಣ್ಕುಮಾರ್, ಸಿ. ದುರ್ಗೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಎ.ಬಿ. ಸ್ವಾತಿ, ಶಿಕ್ಷಕರುಗಳಾದ ಎಸ್.ಎಸ್. ಶಿವಪ್ರಸಾದ್, ಪುಷ್ಪ, ಸುರೇಶ್ ಮಾತನಾಡಿದರು.
ಶಾಲಾ ಶಿಕ್ಷಕ ಎಸ್.ಎಸ್. ಶಿವಪ್ರಸಾದ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಸಿ.ಎಂ. ಸುಲೋಚನ, ಹೆಚ್.ಕೆ. ಸೋಮಣ್ಣ, ನರೇಶ್, ಕುಸುಮ, ಎ.ಸಿ. ಸೋಮಯ್ಯ, ಮಕ್ಕಳ ಪೋಷಕ ಪರಿಷತ್ತಿನ ವೆಂಕಟೇಶ್ ಉಪಸ್ಥಿತರಿದ್ದರು.