ವೀರಾಜಪೇಟೆ, ಮಾ. 27: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗರ್ಭದರಿಸಿದ ಮಾತೆಯರಿಗಾಗಿ ನೀಡಲಾಗುವ ಧನಸಹಾಯವು ಕೈಗೆ ದೂರಕದೇ ಮಹಿಳೆಯರು ಸಂಕಷ್ಟ ಎದುರಿಸುತ್ತ್ತಿರುವದಾಗಿ ಗ್ರಾಮಸ್ಥರು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಂಬಾಡಿ (ದ್ವಿತೀಯ) ಗ್ರಾಮದಲ್ಲಿ ಸುಮಾರು 10 ರಿಂದ 15 ಮಂದಿ ಪ್ರಸವ ಪೂರ್ವದಿಂದ ಮಗು ಜನನವಾದ 5-6 ತಿಂಗಳು ಕಳೆದರೂ ಕೇಂದ್ರ ಸರ್ಕಾರದಿಂದ ಗರ್ಭಿಣಿ ಮಹಿಳೆಗೆ ದೂರಕುವ ಮಾತೃ ವಂದನಾ ಯೋಜನೆಯಲ್ಲಿ ವಿತರಿಸಲಾಗುವ ಸಹಾಯಧನ ಮತ್ತು ರಾಜ್ಯ ಸರ್ಕಾರದ ಯೋಜನೆಯಾದ ಮಾತೃ ಶ್ರೀ ಸಹಾಯಧನವು ಖಾತೆಗೆ ಬಂದು ಸೇರಿಲ್ಲ. ಮಾಹಿತಿ ಕೊರತೆ ಮತ್ತು ಅಂಗನವಾಡಿ ಕಾರ್ಯಕರ್ತರ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಗ್ರಾಮದ ನಿವಾಸಿಯಾದ ಲೋಕೇಶ್ ಅವರ ಪತ್ನಿ ಪಿ.ಆರ್. ರತಿ ಅವರು ಆರೋಪಿಸುತ್ತಾರೆ.
ಚಂದ್ರಪ್ರಕಾಶ್ ಅವರ ಪತ್ನಿ ಜಾನ್ಸಿ ಸಿ.ಕೆ. ಅವರು ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ತಾಯಿ ಮತ್ತು ಮಗುವಿನ ಸುರಕ್ಷಾ ಕಾರ್ಡ್ ತಾಯಿ ಕಾರ್ಡ್ ಪಡೆಯಲು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ನಮ್ಮಿಂದ ಆಧಾರ್ ಕಾರ್ಡ್, ವಿವಾಹ ನೊಂದಾಣಿ ಪತ್ರ, ಭಾವಚಿತ್ರ, ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪಡೆದುಕೊಂಡು ತಾಯಿ ಕಾರ್ಡ್ ನೀಡಿರುತ್ತಾರೆ. ಗರ್ಭ ಧÀರಿಸಿದ ಕೆಲವು ತಿಂಗಳ ನಂತರ ದೃಢೀಕರಿಸಲು ದಾಖಲೆಗಳ ನಕಲು ಪಡೆಯಲಾಗಿದೆ ಹೀಗೆ ಮೂರು ಬಾರಿ ದಾಖಲೆಗಳನ್ನು ಒದಗಿಸಲಾಗಿದೆ. ಮಗುವಿನ ಜನನ ಕಳೆದು ಮಗುವಿಗೆ ಇಂದು 5 ತಿಂಗಳು ಪೂರ್ಣ ಗೊಂಡಿರುತ್ತದೆ. ಇಂದಿನವರೆಗೆ ನನ್ನ ಬ್ಯಾಂಕ್ ಖಾತೆಗೆ ಯಾವದೇ ಹಣವು ಬಂದಿರುವದಿಲ್ಲ. ಇದರ ಬಗ್ಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತರನ್ನು ಕೇಳಿದಾಗ ‘ನಿಮಗೆ ಸಹಾಯಧನದ ಅವಶ್ಯಕತೆ ಇರುವದಿಲ;್ಲ ಕಾನೂನು ಗೊತ್ತಿದೇ ಎಂದು ಬೀಗಬಾರದು’ ಎಂದು ಹೀಯಾಳಿಸಿ ಕಳುಹಿಸಿದರು. ಅಂದಿನಿಂದ ಅಂಗನವಾಡಿಗೆ ನಾವುಗಳು ತೆರಳಿಲ್ಲ. ಸರ್ಕಾರದ ಯಾವದೇ ಮಾಹಿತಿಗಳು ಲಭ್ಯವಾಗುವದಿಲ್ಲ.
ನಾನು ನಲೆಸಿದ ಸ್ಥಳದಿಂದ ಆಜುಬಾಜುವಿನಲ್ಲಿರುವ ಇತರ ಮಕ್ಕಳ ತಾಯಂದಿರನ್ನು ವಿಚಾರಿಸಿದಾಗಲೂ ಅವರಿಂದಲೂ ಬಂದ ಮಾಹಿತಿ ‘ನಮಗೂ ನಮ್ಮ ಬ್ಯಾಂಕ್ ಖಾತೆಗೆ ಯಾವದೇ ಹಣ ಸಂದಾಯವಾಗಿಲ್ಲ’ ಎಂಬದಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನೊಂದು ನುಡಿದರು.
ಉಷಾ ಅರುಣ್ ಕುಮಾರ್ ಅವರು ಮಾತನಾಡಿ ಗ್ರಾಮದಿಂದ ಕುಟ್ಟಂದಿ ಗ್ರಾಮದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರವು ಸುಮಾರು 17 ಕಿಮೀಗಳಾಗಿದೆ. ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅರೋಗ್ಯ ಸಹಾಯಕಿ 8 ತಿಂಗಳ ಗರ್ಭಿಣಿಯನ್ನು ತಪಾಸಣೆಗಾಗಿ ಬರಲು ಹೇಳಿದ್ದು ಪ್ರಸವ ವೇದನೆಯಿಂದ ನಾವುಗಳು ಕೇಂದ್ರಕ್ಕೆ ತೆರಳಲು ಹಿಂದೇಟು ಹಾಕಿದ್ದೆವು ಗರ್ಭಿಣಿ ತಾಯಂದಿರ ಆರೈಕೆಯನ್ನು ಆಶಾ ಕಾರ್ಯಕರ್ತೆ, ಆರೋಗ್ಯ ಕೇಂದ್ರ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಬೇಕು. ಪ್ರಸವ ಪೂರ್ವದಿಂದ ಮಗುವಿನ ಜನನದವರೆಗೆ ಮನೆಗೆ ಭೇಟಿ ನೀಡಿ ಪ್ರಸವದ ಬಗ್ಗೆ ಮಾಹಿತಿ ನೀಡಬೇಕು ಎಂದು ಸರ್ಕಾರದ ಅಧಿನಿಯಮವಿದ್ದರೂ ನಿರ್ಲಕ್ಷ್ಯದಿಂದ ಬೀಗುತ್ತಿರುವದು ಶೋಚನೀಯ ಸಂಗತಿಯಾಗಿದೆ. ಇಲ್ಲಿ ಸರ್ಕಾರದ ಅಧಿಕಾರಿಗಳು, ಸಿಬ್ಬಂದಿಗಳು ಒಂದಲ್ಲಾ ಒಂದು ಸಬೂಬು ನೀಡಿ ಅನುದಾನವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫಲಾನುಭವಿ ಪಿ.ಎಸ್ ರಮ್ಯ ಅವರು ಮಾತನಾಡಿ, ಈ ಭಾಗದಲ್ಲಿ ನೆಲೆಸಿರುವ ಮಗುವಿನ ತಾಯಂದಿರು 2018ರಲ್ಲಿ ಒಂದು ಮತ್ತು ಎರಡು ತಿಂಗಳ ಅವಧಿಯ ವ್ಯತ್ಯಾಸದಲ್ಲಿ ಮಗುವಿಗೆ ಜನನ ನೀಡಿದ್ದಾರೆ. ಇಲ್ಲಿ ಒಬ್ಬರಿಗೆ ಮಾತ್ರ ಕೇಂದ್ರದ ಅನುದಾನವು ಲಭಿಸಿದೆ. ಅದರೆ ಇನ್ನುಳಿದ 10-15 ಮಂದಿ ತಾಯಂದಿರ ಬ್ಯಾಂಕ್ ಖಾತೆಗೆ ಯಾವದೇ ಹಣ ಸಂದಾಯವಾಗಿರು ವದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ತಾಯಂದಿರಿಗೆ ಮಾಹಿತಿ ನೀಡುವಲ್ಲಿ ಎಡವಿದ್ದಾರೆ. ಇದೀಗ ಮಗುವಿನ ಜನನವಾಗಿ 4, 5, 6, ತಿಂಗಳು ಕಳೆದಿವೆ. ಇಂದಿಗಾದರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧÀನವು ಬಂದಲ್ಲಿ ಬಡತನದ ಬೇಗೆ ಒಂದಿಷ್ಟು ನಿವಾರÀಣೆಯಾಗ ಬಹುದು ಎಂದು ಭಾವುಕರಾಗಿ ನುಡಿದರು.
ಗ್ರಾಮಸ್ಥರ ಪರವಾಗಿ ರಮಾ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರಸವದ ವೇಳೆಯಲ್ಲಿ ಧನ ಸಹಾಯ ನೀಡಿ ಪ್ರಸವವು ಸುಗಮವಾಗಲೆಂದು ಬಯಸುತ್ತದೆ. ಆದರೆ ಇಲ್ಲಿ ಯಾವದೇ ಮಾಹಿತಿ ನೀಡದೆ ಸರ್ಕಾರಿ ಸಿಬ್ಬಂದಿಗಳು ಮಲತಾಯಿ ಧೋರಣೆ ಮಾಡುತ್ತಿರುವದು ನಂಬಿಕೆಗೆ ದ್ರೋಹ ಮಾಡುವ ಕೆಲಸ. ಇನ್ನಾದರೂ ಇಲಾಖೆಗಳು ಎಚ್ಚೆತ್ತು ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು. -ಕೆ.ಕೆ.ಎಸ್., ವೀರಾಜಪೇಟೆ