ಕರಿಕೆ, ಮಾ. 26: ಪಕ್ಷಿಗಳು ಪ್ರಕೃತಿಯ ಆಭರಣಗಳಿದ್ದಂತೆ. ಅವುಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದು. ಗುಬ್ಬಿಯ ಜೀವನ ಶೈಲಿಯಿಂದ ಮಾನವ ಕೂಡಿಬಾಳುವ ಗುಣವನ್ನು ಬೆಳೆಸಿಕೊಳ್ಳಬಹುದು. ಆದರೆ ಗುಬ್ಬಿಯ ಆವಾಸ ಸ್ಥಾನದ ನಾಶ ಮತ್ತು ಮೊಬೈಲ್ ಟವರ್, ಇಲೇಕ್ಟ್ರಿಕ್ ಲೈನ್‍ಗಳು ಗುಬ್ಬಿಯ ವಿನಾಶಕ್ಕೆ ಕಾರಣವಾಗಿದೆ ಎಂದು ಪುಷ್ಪಗಿರಿ ವನ್ಯಧಾಮದ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ ನಾಯ್ಕ ಹೇಳಿದರು. ಮಾಂದಲಪಟ್ಟಿಯಲ್ಲಿ ನಡೆದ ವಿಶ್ವ ಅರಣ್ಯ ದಿನಾಚರಣೆ ಮತ್ತು ಅಂತರ್ರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಅರಣ್ಯ ರಕ್ಷಕ ಪೆರಿಯಸ್ವಾಮಿ ವೀಕ್ಷಕರಾದ ರಾಜೇಶ, ಹರೀಶ ಯೋಗೇಶ, ಪವಿತ್ರ, ಗಣೇಶ ಹಾಗೂ ಜೀಪು ಚಾಲಕರು ಸ್ಥಳೀಯರು ಪ್ರವಾಸಿಗರು ಭಾಗವಹಿಸಿದರು. ಕಾರ್ಯಕ್ರಮವನ್ನು ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.