ಕುಶಾಲನಗರ, ಮಾ. 26 : ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ಸಾಮಾಜಿಕ ಸೇವೆಯಲ್ಲಿ ತೊಡಗುವದರೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಆಡಳಿತ ಅಧಿಕಾರಿ ಜಿ.ಸಿ.ಲಿಂಗರಾಜು ಕರೆ ನೀಡಿದ್ದಾರೆ.
ಅವರು ಕುಶಾಲನಗರದ ಗೊಂದಿಬಸವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾಲೇಜಿನ 2018-19ರ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಬಿರದ ಮೂಲಕ ಒಗ್ಗಟ್ಟು ಹಾಗೂ ಸಹಕಾರ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯ. ಮುಂದಿನ ಜೀವನಕ್ಕೆ ಇಂತಹ ಶಿಬಿರಗಳು ಅಡಿಪಾಯವಾಗಿ ಕಾರ್ಯನಿರ್ವ ಹಿಸಲಿದೆ ಎಂದರು. ಶಿಬಿರಾಧಿಕಾರಿ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ರಾದ ಪ್ರಸಾದ್ ಸಾಲ್ಯಾನ್ ಮಾತನಾಡಿ, ಶಿಬಿರದಲ್ಲಿ ವಿದ್ಯಾರ್ಥಿ ಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಗಳು, ಪರಿಸರ ಸಂರಕ್ಷಣೆ, ರಕ್ತದಾನ ಮತ್ತು ಏಡ್ಸ್ ಅರಿವು, ನೀರಿನ ಮಿತಬಳಕೆ ಮಹತ್ವದ ಬಗ್ಗೆ ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೈನಂದಿನ ಚಟುವಟಿಕೆಗಳೊಂದಿಗೆ ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿರುವ ಬಗ್ಗೆ ಮಾಹಿತಿ ಒದಗಿಸಿದರು. ಸ್ಥಳೀಯ ಶಾಲೆ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಜಲಜಾಕ್ಷಿ, ಸಿದ್ದಾಪುರ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಪ್ರೇಮ, ಬೋಯಿಕೇರಿಯ ಶಾಲೆಯ ಮುಖ್ಯೋಪಾಧ್ಯಾಯ ರಾಜು ಅವರುಗಳು ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭ ಶಿಬಿರದಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರದಲ್ಲಿ 7 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಊಟೋಪಚಾರಕ್ಕೆ ಸಹಕರಿಸಿದ ರಾಧಾಕೃಷ್ಣ ಅವರಿಗೆ ಕಿರುಕಾಣಿಕೆ ನೀಡಲಾಯಿತು. ಕಾಲೇಜಿನ ಉಪನ್ಯಾಸಕರಾದ ಕಾವ್ಯ, ರಾಜೀವ್, ಸಹ ಶಿಬಿರಾಧಿಕಾರಿ ಗಳಾದ ಡಾ.ಲಕ್ಷ್ಮಿದೇವಮ್ಮ, ಹರ್ಷ, ಭಾಗ್ಯಮ್ಮ, ಜೀವನ್ ಅವರುಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿ ತೇಜ ಅವರಿಂದ ಪ್ರಾರ್ಥನೆ, ಕೌಶಿಕ್ ಸ್ವಾಗತ, ಧನುಶ್ರೀ ಶಿಬಿರದ ಬಗ್ಗೆ ಮಾಹಿತಿ ಒದಗಿಸಿದರು. ಜಾನ್ಹವಿ ಕಾರ್ಯಕ್ರಮ ನಿರೂಪಿಸುವದರೊಂದಿಗೆ ಶಿಬಿರಾಧಿಕಾರಿ ಪ್ರಸಾದ್ ಸಾಲ್ಯಾನ್ ವಂದಿಸಿದರು.