ಮಡಿಕೇರಿ, ಮಾ. 26: ಕೊಡಗಿನ ಬಹುತೇಕ ಜನರು ವಿರೋಧ ವ್ಯಕ್ತಪಡಿಸುತ್ತಿರುವ ಟಿಪ್ಪು ಜಯಂತಿ ಆಚರಣೆಗೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ಏನು ಹೇಳುತ್ತಾರೆ ಎಂದು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಪ್ರತಾಪ್‍ಸಿಂಹ ಪ್ರಶ್ನಿಸಿದ್ದಾರೆ.

‘ಶಕ್ತಿ’ ನಡೆಸಿದ ಅಭ್ಯರ್ಥಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಟಿಪ್ಪು ಜಯಂತಿ ಪಿತಾಮಹಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಜನರ ವಿರೋಧವನ್ನು ಲೆಕ್ಕಿಸದೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ತಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಆಚರಿಸಿದರು. ಇದೀಗ ಸಿದ್ದರಾಮಯ್ಯ ಅವರ ಅಭ್ಯರ್ಥಿ ಎನಿಸಿರುವ ಕಾಂಗ್ರೆಸ್‍ನ ಸಿ.ಹೆಚ್. ವಿಜಯಶಂಕರ್ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಿ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಪ್ರತಾಪ್‍ಸಿಂಹ ನೇರ ನುಡಿಯಾಡಿದ್ದಾರೆ.

ಸೂಕ್ಷ್ಮ ಪರಿಸರತಾಣ : ಕೊಡಗು ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ತಾಣ (ಬಫರ್ eóÉೂೀನ್) ಜಾರಿಗೆ ಬಹುತೇಕ ವಿರೋಧವಿತ್ತು. ಇದರಿಂದ ಜಿಲ್ಲೆಯ ಅದರಲ್ಲೂ ಗ್ರಾಮೀಣ ವಿಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವ ಆತಂಕ ಮನೆ ಮಾಡಿತ್ತು. ಇದನ್ನು ಜಾರಿಗೊಳಿಸುವ ಪ್ರಸ್ತಾಪ ಬಂದಾಗ ರಾಜ್ಯದಲ್ಲಿ ಸಿ.ಹೆಚ್. ವಿಜಯಶಂಕರ್ ಅವರೇ ಅರಣ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ಬ್ರಹ್ಮಗಿರಿ, ಪುಷ್ಪಗಿರಿ, ನಾಗರಹೊಳೆ ಮತ್ತು ತಲಕಾವೇರಿ ವನ್ಯಧಾಮಗಳ ಸುತ್ತಲ ಹತ್ತು ಕಿ.ಮೀ. ಪರಿವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ತಾಣವಾಗಿ ಪರಿಗಣಿಸುವ ಪ್ರಸ್ತಾಪ ಬಂದಾಗ ರಾಜ್ಯದ ಅರಣ್ಯ ಸಚಿವರಾಗಿದ್ದ ವಿಜಯಶಂಕರ್ ಅವರು ಯಾವದೇ ವಿರೋಧ ವ್ಯಕ್ತಪಡಿಸಲಿಲ್ಲ.

ಜಿಲ್ಲೆಯಲ್ಲಿ ಜನರ ತೀವ್ರ ವಿರೋಧವನ್ನು ಪರಿಗಣಿಸದೆ ನಗಣ್ಯವಾಗಿ ಭಾವಿಸಿದರು. ಇಂತಹ ಆತಂಕದ ಸನ್ನಿವೇಶ ಆದಾಗ ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಅವರು ಸಚಿವರುಗಳನ್ನೆಲ್ಲಾ ಕರೆದು ಸಭೆ ನಡೆಸಿ ‘ಬಫರ್ eóÉೂೀನ್’ನ ದುಷ್ಪರಿಣಾಮದ ಕುರಿತು ಮನದಟ್ಟು ಮಾಡಿದರು. ಅವರ ಪ್ರಯತ್ನದಿಂದ ಕೊಡಗಿನ ನಾಲ್ಕು ವನ್ಯಧಾಮಗಳ ಪರಿವ್ಯಾಪ್ತಿಯಲ್ಲಿ ಹತ್ತು ಕಿ.ಮೀ. ವಿಸ್ತರಣಾ ಪ್ರದೇಶವನ್ನು ಒಂದು ಕಿ.ಮೀ.ಗೆ ಇಳಿಸಲಾಯಿತು. ಇನ್ನೂ ಕೆಲವೆಡೆ ಶೂನ್ಯ ಕಿ.ಮೀ. ಎಂದು ಪರಿಗಣಿಸಲಾಯಿತು. ಆ ಸಂದರ್ಭ ಬೋಪಯ್ಯ ಅವರು ಅಸಮಾಧಾನಗೊಂಡು ವಿಜಯಶಂಕರ್ ಅವರು ಅರಣ್ಯ ಸಚಿವ ಸ್ಥಾನವನ್ನು ತ್ಯಜಿಸುವಂತೆಯೂ ಆಗ್ರಹಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದಾಗ ವಿಜಯಶಂಕರ್ ಈ ಕಾರಣದಿಂದಲೇ ಸಚಿವ ಸ್ಥಾನ ಕಳೆದುಕೊಳ್ಳುವಂತಾಯಿತು ಎಂದು ಪ್ರತಾಪ್‍ಸಿಂಹ ಅಭಿಪ್ರಾಯಪಟ್ಟರು.

ಅಭಿವೃದ್ಧಿ - ಮೋದಿ : ದ್ವಿತೀಯ ಬಾರಿಯ ಈ ಸ್ಪರ್ಧೆಯಲ್ಲಿ ತಾನು ಸಂಸದನಾಗಿ ನಡೆಸಿರುವ ಅಭಿವೃದ್ಧಿ ಕಾರ್ಯಗಳೂ ಹಾಗೂ ಪ್ರಧಾನಿ ಮೋದಿಯವರ ನಾಯಕತ್ವವೇ ತನಗೆ ಶ್ರೀರಕ್ಷೆಯಾಗಿದೆ ಎಂದು ಪ್ರತಾಪ್ ಸಿಂಹ ನುಡಿದರು. ಪ್ರಾಕೃತಿಕ ವಿಕೋಪ ಸಂದರ್ಭ ತಮ್ಮಿಂದ ನಿರೀಕ್ಷಿತ ಸ್ಪಂದನ ದೊರಕಲಿಲ್ಲ ಎನ್ನುವ ಕೆಲವರ ಆರೋಪದ ಕುರಿತು ಏನು ಹೇಳುತ್ತೀರಿ ಎಂಬ ‘ಶಕ್ತಿ’ಯ ಪ್ರಶ್ನೆಗೆ ಪ್ರತಾಪ್‍ಸಿಂಹ ಈ ಕೆಳಗಿನಂತೆ ಪ್ರತಿಕ್ರಿಯಿಸಿದರು.

ತಾನು ಶತಪ್ರಯತ್ನ ನಡೆಸಿ ರಕ್ಷಣಾ ಸಚಿವರ ಸಹಕಾರದಿಂದ ಎನ್‍ಡಿಆರ್‍ಎಫ್ ತಂಡವನ್ನು ಸಕಾಲದಲ್ಲಿ ಜಿಲ್ಲೆಗೆ ಕರೆಸಲು ಸಾಧ್ಯವಾಯಿತು. ಮೃತರಾದ 20 ಮಂದಿಯ ಕುಟುಂಬಕ್ಕೆ ತಲಾ 7 ಲಕ್ಷ ಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರವೇ ತಲಾ ರೂ. 6 ಲಕ್ಷ ಒದಗಿಸಿದೆ. ರಾಜ್ಯಕ್ಕೆ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ರೂ. 520 ಕೋಟಿ ಕೇಂದ್ರ ಸರ್ಕಾರ ನೀಡಿದೆ. ಜೋಡುಪಾಲದಿಂದ ಸುಂಟಿಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ ದುರಸ್ತಿಯಲ್ಲಿ ಎನ್‍ಡಿಆರ್‍ಎಫ್ ತಂಡ ಪ್ರಮುಖ ಪಾತ್ರ ವಹಿಸಿದೆ ಎಂದು ವಿವರಿಸಿದರು.

ಕೊನೆಯ ಹನಿ : ಮಾತು ಮುಕ್ತಾಯಗೊಳಿಸುತ್ತಾ ಪ್ರತಾಪ್‍ಸಿಂಹ ಅವರು ಹೇಳಿದ್ದು, ಹೀಗೆ ‘ ನಾನು ಸಂಸದನಾಗಿದ್ದ ಸಂದರ್ಭ ಯಾರಿಂದಲೂ 1ರೂ. ಕಮಿಷನ್ ತೆಗೆದುಕೊಂಡಿಲ್ಲ. ಯಾವದೇ ಕೆಲಸದಲ್ಲೂ ಪಾರದರ್ಶಕತೆ ನನ್ನ ಧ್ಯೇಯವಾಗಿತ್ತು. ಯಾರಿಂದಲೂ ಬಾಧ್ಯತೆಗೋಸ್ಕರ ಟೀ ಕುಡಿದವನಲ್ಲ. ಈ ನೈತಿಕ ಸ್ಥೈರ್ಯ ನನಗಿದ್ದು, ಜನರು ನನ್ನನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ನನಗಿದೆ’ ನೀವು ರಾಜಕಾರಣಿಗಿಂತ ಪತ್ರಕರ್ತರಾಗಿಯೇ ಆಸಕ್ತಿ ವಹಿಸಿದ್ದೀರಿ ಎನ್ನುವ

(ಮೊದಲ ಪುಟದಿಂದ) ಮಾತಿದೆಯಲ್ಲ ಎನ್ನುವ ಪ್ರಶ್ನೆಗೆ ಅದು ನನ್ನ ಮೂಲ ವೃತ್ತಿ. ಪತ್ರಿಕೋದ್ಯಮದ ಆಸಕ್ತಿಯನ್ನು ಎಂದಿಗೂ ನಾನು ಬಿಡಲೊಲ್ಲೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಎಲ್ಲಾ ಜನರನ್ನು ಕೂಡ ಎಲ್ಲಾ ಸಂದರ್ಭದಲ್ಲಿಯೂ ತೃಪ್ತಿ ಪಡಿಸಲು ಅಸಾಧ್ಯ. ನಾನು ಮಾಡಿರುವ ಕೆಲಸದ ಬಗ್ಗೆ ತೃಪ್ತಿ ಇದೆ. ನಾನು ಕೊಡಗಿನಲ್ಲಿ ಕಾಫಿ ತೋಟ ಮಾಡಿಲ್ಲ, ಮೈಸೂರಿನಲ್ಲಿ ಬಂಗಲೆ ಕಟ್ಟಿಲ್ಲ, ಯಾರಿಂದಲೂ 1 ರೂಪಾಯಿಯ ಬಿಸ್ಕೆಟ್ ಪಡೆದು ತಿಂದಿಲ್ಲ ಎಂದು ಪ್ರತಾಪ್‍ಸಿಂಹ ಮಾತು ಮುಗಿಸಿದರು.