ವೀರಾಜಪೇಟೆ, ಮಾ.26: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಕೊಡಗು ವಲಯ ಮಟ್ಟದ ಮಹಿಳೆಯರ ಅಂತರ ಕಾಲೇಜು ಗ್ರಾಮೀಣ ಕ್ರೀಡಾಕೂಟ ವನ್ನು ಆಯೋಜಿಸಲಾಗಿತ್ತು. ವಲಯ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮೂರು ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ವಾಲಿಬಾಲ್ನಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ, ವೀರಾಜಪೇಟೆಯ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಾಕಿ ಕ್ರೀಡೆಯಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ, ವೀರಾಜಪೇಟೆಯ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಥ್ರೋಬಾಲ್ ಕ್ರೀಡೆಯಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ, ವೀರಾಜಪೇಟೆಯ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಕಬಡ್ಡಿಯಲ್ಲಿ ವೀರಾಜಪೇಟೆಯ ಕಾವೇರಿ ಕಾಲೇಜು ತಂಡ ಪ್ರಥಮ, ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಹಗ್ಗ ಜಗ್ಗಾಟದಲ್ಲಿ ವೀರಾಜಪೇಟೆಯ ಕಾವೇರಿ ಕಾಲೇಜು ತಂಡ ಪ್ರಥಮ, ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಲಗೋರಿ ಕ್ರೀಡೆಯಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ ಹಾಗೂ ವೀರಾಜಪೇಟೆಯ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮಾಜಿ ನಿರ್ದೇಶಕಿ ಕೋದಂಡ ಸ್ವಾತಿ ಬೋಪಣ್ಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಗೋಣಿಕೊಪ್ಪಲು ಲಯನ್ಸ್ಸಂಸ್ಥೆಯ ಮಾಜಿ ಅಧ್ಯಕ್ಷ ಚಿÀರಿಯಪಂಡ ಡಾಟಿ ಪೂಣಚ್ಚ ಹಾಗೂ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನಲ್ಲಿ ಅಧೀಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬೆಲ್ಲತಂಡ ತಾರ ಕಾವೇರಮ್ಮ ಮತ್ತು ಮಂಗಳೂರು ವಿಶ್ಬವಿದ್ಯಾನಿಲಯದಿಂದ ವೀಕ್ಷಕರಾಗಿ ಆಗಮಿಸಿದ ಪವನ್ ಕೃಷ್ಣ ಹಾಜರಿದ್ದರು.
ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಡಾ. ಎಂ.ಎಂ. ದೇಚಮ್ಮರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಂಗಳೂರು ವಿಶ್ಬವಿದ್ಯಾನಿಲಯವು ಮಹಿಳೆಯರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕ್ರೀಡೆ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ ಎ.ಎಂ. ಕಮಲಾಕ್ಷಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಎನ್.ಸಿ. ನೀಲಮ್ಮ, ಎಂ.ಡಿ. ಅಕ್ಕಮ್ಮ, ಕೆ.ಎಸ್. ಜ್ಯೋತಿ ಹಾಗೂ ಕೆ.ಕೆ. ಸರಸ್ವತಿಯವರನ್ನು ಸನಾನ್ಮಿಸಲಾಯಿತು.