ಮಡಿಕೇರಿ, ಮಾ. 26: ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯು ಏಪ್ರಿಲ್ 6 ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು hಣಣಠಿs://ತಿತಿತಿ.ಟಿvsಚಿಜmissioಟಿಛಿಟಚಿssiv.iಟಿ ವೆಬ್‍ಸೈಟ್ ಮೂಲಕ ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಆನ್‍ಲೈನ್ ಅರ್ಜಿ ಪ್ರತಿಯನ್ನು ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಒಂದು ವೇಳೆ ಅರ್ಜಿಯಲ್ಲಿ ಅಥವಾ ಪ್ರವೇಶ ಪತ್ರದಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜವಾಹರ ನವೋದಯ ವಿದ್ಯಾಲಯ, ಗಾಳಿಬೀಡು, ಮಡಿಕೇರಿ, ಕೊಡಗು ಜಿಲ್ಲೆಯ ಪ್ರಾಚಾರ್ಯ ಪಿ.ಎಂ.ಐಸಾಕ್ 9448790386, ಉಪ ಪ್ರಾಚಾರ್ಯ ಸಿ.ಎಚ್. ದಿನೇಶನ್ 9731823457, ಕನ್ನಡ ಶಿಕ್ಷಕ ಗಣೇಶ್ ಹೆಗಡೆ 9482557322 ಇವರನ್ನು ಏಪ್ರಿಲ್ 4 ರೊಳಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.