ಮಡಿಕೇರಿ, ಮಾ. 26: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ತಾ. 30 ರಂದು ಬೆಳಿಗ್ಗೆ 10 ಗಂಟೆಗೆ ಪದವಿ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ನೆಡೆಯಲಿದೆ.

ಮೈಸೂರಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಂಪೆನಿಗೆ ಉದ್ಯೋಗಕ್ಕಾಗಿ ಆಯ್ಕೆ ನಡೆಯಲಿದೆ. ಯಾವದೇ ವಿಷಯದಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಹಾಗೂ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೂಕ್ತ ದಾಖಲಾತಿ ಹಾಗೂ ಸ್ವವಿವರದೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಇದೊಂದು ಮುಕ್ತ ಅವಕಾಶವಾಗಿದ್ದು, ಆಸಕ್ತರು ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.