ಶನಿವಾರಸಂತೆ, ಮಾ. 26: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಶನಿವಾರಸಂತೆ ಪೊಲೀಸ್ ಠಾಣೆ ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟ ಪ್ರಕರಣಗಳನ್ನು ಬಯಲಿಗೆಳೆಯುತ್ತಿದೆ.
ಶನಿವಾರಸಂತೆಯ ಸಮೀಪದ ತ್ಯಾಗರಾಜ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಅಂದಾಜು ರೂ. 1,455.36 ಮೌಲ್ಯದ 48 ಬ್ರಾಂಡಿ ಪ್ಯಾಕೆಟ್ ಸಹಿತ ಆರೋಪಿ ರತ್ನನಾಗರಾಜು ಎಂಬಾಕೆಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ, ಸಿಬ್ಬಂದಿಗಳಾದ ಶಫೀರ್, ಬೋಪಣ್ಣ, ಹರೀಶ್, ಶಿವಣ್ಣ, ಪಾಟೀಲ್, ಸವಿತಾ, ಸೋನಿ, ಶಶಿ ಪಾಲ್ಗೊಂಡಿದ್ದರು.