ಮಡಿಕೇರಿ, ಮಾ. 25: ಮಡಿಕೇರಿ ನಗರ ಬಿ.ಜೆ.ಪಿ. ಮಂಡಲದ ವಾರ್ಡ್ ಸಮಿತಿ ಅಧ್ಯಕ್ಷರ ಬಿಎಲ್ಹೋ ಶಕ್ತಿ ಕೇಂದ್ರದ ಸಭೆ ನಗರ ಬಿಜೆಪಿ ಕಚೇರಿಯಲ್ಲಿ ನಗರಾಧ್ಯಕ್ಷ ಮಹೇಶ್ ಜೈನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಬಿ.ಕೆ. ಅರುಣಕುಮಾರ್ ಮೊಂತಿ ಗಣೇಶ್, ಉಮೇಶ್ ಸುಬ್ರಮಣಿ, ಬಿ.ಕೆ. ಜಗದೀಶ್, ಅನಿತಾ ಪೂವಯ್ಯ, ಅಪ್ಪಣ್ಣ ಮತ್ತು ಕಾರ್ಯಕರ್ತರು ಹಾಜರಿದ್ದರು. ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆ ಮತ್ತು ಕಾರ್ಯಕರ್ತರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಲಾಯಿತು.