ಗೋಣಿಕೊಪ್ಪ ವರದಿ, ಮಾ, 25: ಕೊಡಗಿನ ರೈತರ ಹಾಗೂ ನಾಗರಿಕರ ಹಿತ ಕಾಯುವ ದೃಷ್ಟಿಯಿಂದ ರಾಜಕೀಯ ರಹಿತವಾಗಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘದ ಕೊಡಗು ಘಟಕವನ್ನು ಅಸ್ತಿತ್ವಕ್ಕೆ ತರುವ ನಿರ್ಧಾರವನ್ನು ಇಲ್ಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಹಿರಿಯ ರೈತ ಮುಖಂಡರ ಮುಂದಾಳತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಹಿರಿಯ ರೈತರುಗಳಾದ ಚಿಮ್ಮಂಗಡ ಗಣೇಶ್, ಕಳ್ಳಿಚಂಡ ಧನು, ಗುಡಿಯಂಗಡ ಪೂವಪ್ಪ, ಮಚ್ಚಮಾಡ ರಂಜಿ ಹಾಗೂ ಆದೇಂಗಡ ಅಶೋಕ್ ಮುಂದಾಳತ್ವದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರುಗಳ ಸಲಹೆಯಂತೆ ರೈತಸಂಘ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.
ರಾಜಕೀಯ ರಹಿತವಾಗಿ ಜನಪರ ಹೋರಾಟ ಅನಿವಾರ್ಯತೆ ಇದೆ. ರೈತರು ಸರ್ಕಾರದಿಂದ ಪಡೆಯ ಬೇಕಾದ ಸವಲತ್ತು, ಭೂದಾಖಲೆ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಹೋರಾಟದ ಮೂಲಕ ಜನರಿಗೆ ಸಿಗುವಂತೆ ಮಾಡಬೇಕಿದೆ. ರಾಜಕೀಯ ಪ್ರೇರಿತವಾಗಿ ಸಂಘವನ್ನು ಮುನ್ನಡೆಸದೆ, ಜನಪರವಾಗಿ ಇಲಾಖೆ ಹಾಗೂ
ಗೋಣಿಕೊಪ್ಪ ವರದಿ, ಮಾ, 25: ಕೊಡಗಿನ ರೈತರ ಹಾಗೂ ನಾಗರಿಕರ ಹಿತ ಕಾಯುವ ದೃಷ್ಟಿಯಿಂದ ರಾಜಕೀಯ ರಹಿತವಾಗಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘದ ಕೊಡಗು ಘಟಕವನ್ನು ಅಸ್ತಿತ್ವಕ್ಕೆ ತರುವ ನಿರ್ಧಾರವನ್ನು ಇಲ್ಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಹಿರಿಯ ರೈತ ಮುಖಂಡರ ಮುಂದಾಳತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಹಿರಿಯ ರೈತರುಗಳಾದ ಚಿಮ್ಮಂಗಡ ಗಣೇಶ್, ಕಳ್ಳಿಚಂಡ ಧನು, ಗುಡಿಯಂಗಡ ಪೂವಪ್ಪ, ಮಚ್ಚಮಾಡ ರಂಜಿ ಹಾಗೂ ಆದೇಂಗಡ ಅಶೋಕ್ ಮುಂದಾಳತ್ವದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರುಗಳ ಸಲಹೆಯಂತೆ ರೈತಸಂಘ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.
ರಾಜಕೀಯ ರಹಿತವಾಗಿ ಜನಪರ ಹೋರಾಟ ಅನಿವಾರ್ಯತೆ ಇದೆ. ರೈತರು ಸರ್ಕಾರದಿಂದ ಪಡೆಯ ಬೇಕಾದ ಸವಲತ್ತು, ಭೂದಾಖಲೆ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಹೋರಾಟದ ಮೂಲಕ ಜನರಿಗೆ ಸಿಗುವಂತೆ ಮಾಡಬೇಕಿದೆ. ರಾಜಕೀಯ ಪ್ರೇರಿತವಾಗಿ ಸಂಘವನ್ನು ಮುನ್ನಡೆಸದೆ, ಜನಪರವಾಗಿ ಇಲಾಖೆ ಹಾಗೂ ರೈತರಿಗೆ ಅನ್ಯೋನ್ಯತೆ ಮೂಲಕ ಸರ್ಕಾರದ ಸವಲತ್ತು ತಲಪಿಸುವ ಕೆಲಸವಾಗಬೇಕಿದೆ ಎಂದರು.
ಮುಖಂಡ ಆದೇಂಗಡ ಅಶೋಕ್ ಮಾತನಾಡಿ, ಕೊಡಗಿನಲ್ಲಿ ನಡೆದ ಭೂಕುಸಿತ ವಿಚಾರದಲ್ಲಿ ವೈಜ್ಞಾನಿಕವಾಗಿ ನಡೆದಿರುವ ಸಾಧಕ-ಬಾಧಕಗಳ ಬಗ್ಗೆ ಹೋರಾಟ ನಡೆದಿಲ್ಲ.
ಹಾರಂಗಿ ಡ್ಯಾಂನಲ್ಲಿ ಹೆಚ್ಚು ನೀರು ಶೇಖರಣೆ ಮಾಡಿದ ಕಾರಣ, ಕುಶಾಲನಗರ ಮುಳುಗಡೆಯಾಯಿತು. ಆದರೆ, ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಕೆಲಸವನ್ನು ಸಂಘಟನೆಗಳು ಮಾಡಲಿಲ್ಲ ಎಂದು ಆರೋಪಿಸಿದರು. ನಕಲಿ ಹೋರಾಟಗಳು ಕೊಡಗು ಜಿಲ್ಲೆಗೆ ಅವಶ್ಯಕತೆ ಬರುವದಿಲ್ಲ. ನ್ಯಾಯಯುತವಾಗಿ ಹೋರಾಟ ನಡೆಸುವ ಮೂಲಕ ರೈತರಿಗೆ ಸ್ಪಂದನ ನೀಡಬೇಕಿದೆ ಎಂದರು.
ರೈತ ಮುಖಂಡ ಚಿಮ್ಮಂಗಡ ಗಣೇಶ್ ಮಾತನಾಡಿ, ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘದ ರಾಜ್ಯ ಹಾಗೂ ಮೈಸೂರು ವಿಭಾಗದ ಮುಖಂಡರುಗಳ ನಿರ್ದೇಶನದಂತೆ ಘಟಕ ಅಸ್ತಿತ್ವಕ್ಕೆ ತರಲಾಗುತ್ತಿದೆ. ಶೀಘ್ರದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಗೌಡ, ಮೈಸೂರು ಜಿಲ್ಲಾಧ್ಯಕ್ಷ ರಾಮೇಗೌಡ ವಿದ್ಯಾಸಾಗರ್, ರಾಜ್ಯ ಸಂಚಾಲಕ ಬಾಬು ಇವರುಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯಾಯಯುತ ಹೋರಾಟದ ಮೂಲಕ ರೈತ ಸಂಘವನ್ನು ಮುನ್ನಡೆಸಲು ರೈತರು ಮುಂದೆ ಬರಬೇಕು ಎಂದರು.
ವಿವಿಧ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು. ಸಭೆಯಲ್ಲಿ ರೈತರುಗಳಾದ ಚಂಗುಲಂಡ ರಾಜಪ್ಪ, ಪೊಯ್ಲೇಂಗಡ ಗೋಪಾಲ್, ಬೊಜ್ಜಂಗಡ ಚೆಂಗಪ್ಪ, ಕೋಟ್ರಂಗಡ ಹರೀಶ್, ಬಾದುಮಂಡ ಮಹೇಶ್, ಪೆಮ್ಮಂಡ ನರೇಶ್, ಪೆಮ್ಮಣಮಾಡ ನಿತಿನ್, ಮಹೇಶ್ ಸಲಹೆ ನೀಡಿದರು.
- ಸುದ್ದಿಪುತ್ರ