ಸೋಮವಾರಪೇಟೆ, ಮಾ. 25: ಕೇರಳ ರಾಜ್ಯದ ಲಾಟರಿಯನ್ನು ಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕೇರಳದ ಕಾಸರಗೋಡಿನಿಂದ ಲಾಟರಿಗಳನ್ನು ತಂದು ಪಟ್ಟಣದ ಕ್ಲಬ್ ರಸ್ತೆಯಲ್ಲಿರುವ ಗೂಡಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕ ಶ್ರೀಕರ್, ಕಾನ್ವೆಂಟ್‍ಬಾಣೆ ನಿವಾಸಿ, ಆಟೋ ಚಾಲಕ ಯೋಗೇಶ್, ಆನೇಕೆರೆ ಬಳಿ ಟಯರ್ ಪಂಕ್ಚರ್ ಅಂಗಡಿ ಇಟ್ಟುಕೊಂಡಿರುವ ಸಂಜಯ್ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂದಿತರಿಂದ ನಗದು ಮೌಲ್ಯವನ್ನು ಹೊಂದಿರುವ 455 ಲಾಟರಿ ಸೇರಿದಂತೆ 12,200 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ

ಬಂಧನ ವಿಧಿಸಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ, ಪ್ರೊಬೇಷನರಿ ಎಸ್.ಐ. ಮೋಹನ್ ರಾಜ್, ಸಿಬ್ಬಂದಿಗಳಾದ ಜಗದೀಶ್, ಪ್ರವೀಣ್, ಕುಮಾರ್, ಧನಲಕ್ಷ್ಮೀ, ಶಿವಕುಮಾರ್, ಮಧು ಅವರುಗಳು ಭಾಗವಹಿಸಿದ್ದರು.