ವೀರಾಜಪೇಟೆ, ಮಾ. 24: ದೇಶದ ಎಲ್ಲೆಡೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ನಗರದ ತೆಲುಗರ ಬೀದಿಯಲ್ಲಿ ಸಡಗರದಿಂದ ಆಚರಿಸಲಾಯಿತು.
ಶ್ರೀ ದಕ್ಷಿಣಾ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ದೇವಾಲಯಗಳ ಆಡಳಿತ ಮಂಡಳಿಯ ವತಿಯಿಂದ ಹೋಳಿ ಆಚರಿಸಲಾಯಿತು. ಮೆರವಣಿಗೆಯು ತೆಲುಗರ ಬೀದಿಯಿಂದ ಸಾಗಿ ದೊಡ್ಡಟ್ಟಿ ಚೌಕಿ, ಜೈನರ ಬೀದಿ ದೇವಾಂಗ ಬೀದಿ ದಖ್ಖನಿ ಮೊಹಲ್ಲಗಳಲ್ಲಿ ಸಾಗಿ ಮಾರಿಯಮ್ಮ ದೇವಾಲಯದಲ್ಲಿ ಕೊನೆಗೊಂಡಿತು. ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಪದ್ಮಾನಾಭ, ಸುಭಾಶ್ ಹಾಗೂ ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು.