ನಾಪೋಕ್ಲು, ಮಾ. 24: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಪಟ್ಟಣದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.

ವಿದ್ಯಾರ್ಥಿಗಳು ಮತದಾನಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತಾ ಪ್ರಭಾತ್‍ಭೇರಿ ನಡೆಸಿದರು. ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಜ್ಞಾ ಸಂಕಲ್ಪವನ್ನು ಬೋಧಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ ಇಂಟರ್ಯಾಕ್ಟ್ ಕ್ಲಬ್ ಸಂಯೋಜಕಿ ಉಷಾರಾಣಿ, ಶಿಕ್ಷಕರಾದ ಕಸ್ತೂರಿ, ಗಂಗಮ್ಮ, ಅಶ್ವಿನಿ ಹಾಗೂ ಸ್ಕೌಟ್ಸ್ ಮತ್ತು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.