ಹೊದ್ದೂರು, ಮಾ. 24 : ಮೂರ್ನಾಡು ಸನಿಹದ ಹೊದ್ದೂರುವಿನಲ್ಲಿ ವಿವಿಧ ದೇವರುಗಳ ವಾರ್ಷಿಕ ಉತ್ಸವ ತಾ. 28ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಈ ಪ್ರಯುಕ್ತ 28ರಂದು ಸಂಜೆ ದೀಪಾರಾಧನೆ(ಅಂದಿಬೊಳಕ್) 29ರಂದು ಬೆಳಿಗ್ಗೆ ಬೋಡ್ ಆಟ, ಪಟ್ಟಣಿ ಹಬ್ಬ, 30ರಂದು ಭದ್ರಕಾಳಿ ಉತ್ಸವ, ಅಪರಾಹ್ನದ ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಕಾವೇರಿ ನದಿಯಲ್ಲಿ ಭಗವತಿ ದೇವಿಯ ಅವಭೃತ ಸ್ನಾನ, ಮೆರವಣಿಗೆ, ದೇಗುಲದ ಸುತ್ತಲೂ ದೇವಿಯ ಪ್ರದಕ್ಷಿಣಾ ನರ್ತನ, ಅಲಂಕಾರ ಪೂಜೆ ನಡೆಯಲಿದೆ. 31 ರಂದು ಕಲಸ, ಚಾಮುಂಡಿ ದೇವಳದ ನಡೆ ತೆರೆಯುವದು, ಅಂದಿ ತೋಯತ, ಏಪ್ರಿಲ್ 1ರಂದು ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಕೋಲಗಳು, 2ರಂದು ಬೆಳ್ಳಿಗ್ಗೆ 10ಕ್ಕೆ ಅಜ್ಜಪ್ಪ, 12ಕ್ಕೆ ವಿಷ್ಣು ಮೂರ್ತಿ ಉತ್ಸವ, ಭಾರಣಿ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.