ಶನಿವಾರಸಂತೆ, ಮಾ. 24: ಶನಿವಾರಸಂತೆ, ಕೊಡ್ಲಿಪೇಟೆ ವಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ಗಳ ಪೆರೇಡ್ ನಡೆಸಲಾಯಿತು. ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡು ರೌಡಿ ಲಿಸ್ಟ್ನಲ್ಲಿರುವ ಒಟ್ಟು 25 ಮಂದಿಗೆ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ಯಾವದೇ ಶಾಂತಿ ಭಂಗವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ, ಅಪರಾಧ ವಿಭಾಗದ ಈರಪ್ಪ ಪ್ರದೀಪ್ಕುಮಾರ್ ಸಹಾಯಕ ಠಾಣಾಧಿಕಾರಿ ನಂಜುಂಡೇಗೌಡ, ಸಿಬ್ಬಂದಿಗಳಾದ ಹರೀಶ್, ಶಿವಲಿಂಗ, ಶಿವಣ್ಣ, ಶಫೀರ್, ಸವಿತಾ, ಶಶಿ ಇತರರು ಉಪಸ್ಥಿತರಿದ್ದರು.