ಗೋಣಿಕೊಪ್ಪ ವರದಿ, ಮಾ. 24 : ದಕ್ಷಿಣ ಕೊಡಗಿನ ತಿತಿಮತಿ ಸುತ್ತಮುತ್ತ ಭಾಗಕ್ಕೆ ಮಳೆ ಕರುಣಿಸುವಂತೆ ತಿತಿಮತಿ ಭಾಗದ ಜನತೆ ಪಾಡಿ ಇಗ್ಗುತ್ತಪ್ಪನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದಿಂದ ಇಗ್ಗುತ್ತಪ್ಪನ ಸ್ಥಾನಕ್ಕೆ ತೆರಳಿದ ಗ್ರಾಮದ ಒಂದಷ್ಟು ಭಕ್ತರು ಮಳೆ ಇಲ್ಲದೆ ಜನತೆ ಪರಿತಪಿಸುವಂತಾಗಿದೆ. ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಕಾರಣ ಮಳೆಗಾಗಿ ಪೂಜೆ ಸಲ್ಲಿಸಿದರು.

ಗ್ರಾಮಸ್ಥರುಗಳಾದ ಚೆಪ್ಪುಡೀರ ಕಾರ್ಯಪ್ಪ, ಮೋಹನ್, ಕಿಸು, ಮದನ್ ಸೇರಿದಂತೆ ಇತರರು ಪ್ರಾರ್ಥನೆ ಸಲ್ಲಿಸಿದರು.