ಕೂಡಿಗೆ, ಮಾ. 24: ಇತ್ತೀಚೆಗೆ ಬೆಳಗಾವಿಯ ಕೆ.ಎಲ್.ಇ. ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಷ್ಟಮಟ್ಟದ ವಿಚಾರ ಸಂಕಿರ್ಣದಲ್ಲಿ ಬೆಂಗಳೂರಿನ ಎಂ.ವಿ.ಜೆ. ಕಾಲೇಜಿನ ಅಂತಿಮ ವರ್ಷದ ಕೆ.ಎಲ್. ಸುಮನ್‍ಗೌಡ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಬೇರೆ ರಾಜ್ಯಗಳಿಂದ ಸುಮಾರು 45 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೆ.ಎಲ್. ಸುಮನ್‍ಗೌಡ ಅವರು ಸ್ಕಿಜೋಫ್ರೇನಿಯಾ ರೋಗದಿಂದ ಮುಕ್ತಿ ಬಗ್ಗೆ ಉಪನ್ಯಾಸ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ತೊರೆನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಹಾಗೂ ಲಕ್ಷ್ಮಿ ದಂಪತಿಗಳ ಪುತ್ರ.