ಸೋಮವಾರಪೇಟೆ, ಮಾ.24: ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ, ಹೊಸತೋಟದ ನುಸ್ರತುಲ್ ಅನಾಂ ಟ್ರಸ್ಟ್ ವತಿಯಿಂದ ಅಳವಡಿಸಲಾಗಿರುವ ರಸ್ತೆ ಸೂಚನಾ ಫಲಕಗಳನ್ನು ಬೀಟ್ ಪೊಲೀಸ್ ಜಗದೀಶ್ ಅವರು ಉದ್ಘಾಟಿಸಿದರು. ಟ್ರಸ್ಟ್ ವತಿಯಿಂದ ರಾಜ್ಯ ಹೆದ್ದಾರಿಯ, ಹೊಸತೋಟ ವ್ಯಾಪ್ತಿಯ 4 ಕಡೆಗಳಲ್ಲಿ ವಾಹನ ಚಾಲಕರಿಗೆ ಅನುಕೂಲವಾಗಲೆಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಟ್ರಸ್ಟ್‍ನ ಪ್ರಮುಖ ಕಬೀರ್ ತಿಳಿಸಿದರು. ಈ ಸಂದರ್ಭ ಬೆಳೆಗಾರ ಸಂಜಯ್, ಮೋಹನ್, ಟ್ರಸ್ಟ್‍ನ ಸಿಯಾಬ್, ಇಸ್ಮಾಯಿಲ್, ಆಟೋ ಚಾಲಕರ ಸಂಘದ ಹಮೀದ್, ರಿಯಾಜ್, ಪ್ರಮುಖ ಸಲೀಂ ಹೊಸತೋಟ ಅವರುಗಳು ಉಪಸ್ಥಿತರಿದ್ದರು.