ಶ್ರೀಮಂಗಲ, ಮಾ. 24: ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವವು ತಾ.24 ರಿಂದ ಆರಂಭವಾಗಿದೆ. ಪದ್ಧತಿಯಂತೆ ತಾ.24 ರಂದು ಅಂದಿ ಕೊಟ್ಟುವ ಮೂಲಕ ಉತ್ಸವಕ್ಕೆ ಚಾಲನೆಗೊಂಡಿತು. ತಾ.25 (ಇಂದು) ಇರ್ ಬೊಳಕ್, ದೇವರ ಭಂಡಾರವನ್ನು ನೆರವಂಡ ಕಾವು ಪೊರೆಯಿಂದ ತರುವದು ತಾ.26 ರಂದು ದೇವರ ಪಟ್ಟಣಿ, ಎತ್ತು ಪೋರಾಟ, ದೇವರ ನೃತ್ಯ, ತಾ.27 ರಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಬೊಳಕಾಟ್, ಸಂಜೆ ದೇವರ ಅವಭೃತ ಸ್ನಾನ ಹಾಗೂ ರಾತ್ರಿ ದೇವರ ನೃತ್ಯವಿರುತ್ತದೆ. ತಾ. 28 ರಂದು ನಾಗಪೂಜೆ ಹಾಗೂ ಶುದ್ಧ ಕಲಶ ನಡೆಯಲಿದೆ.