ಮಡಿಕೇರಿ, ಮಾ. 24: ಟೌನ್ ಕೌಂಟಿ ಕ್ಲಬ್ ಬೆಟ್ಟಗೇರಿ ಮತ್ತು ಯವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 27 ರಂದು ಮೂರನೇ ವರ್ಷದ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಏರ್ಪಡಿಸಲಾಗಿದೆ. ಪಂದ್ಯಾಟಕ್ಕೆ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯದ ತಂಡಗಳ ಹೆಸರಾಂತ ಆಟಗಾರರು ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಮೊ. 9449627483, 9945102677, 9483372555 ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.