ಸೋಮವಾರಪೇಟೆ, ಮಾ. 23: ಕಾಡಾನೆಯ ತಿವಿತಕ್ಕೆ ಕಾಡೆಮ್ಮೆಯೊಂದು ಬಲಿಯಾಗಿರುವ ಘಟನೆ ತಾಲೂಕಿನ ಕೂತಿ ಗ್ರಾಮ ಸಮೀಪದ ತಂಬಳಗೇರಿ ಯಲ್ಲಿ ನಡೆದಿದೆ.
ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿರುವ ಕೂತಿ-ತಂಬಳಗೇರಿಯಲ್ಲಿ ಕಾಡೆಮ್ಮೆಯ ಕಳೇಬರ ಕಂಡು ಬಂದಿದ್ದು, ಯಸಳೂರು ಅರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಡಾನೆಯೊಂದಿನ ಕಾಳಗ ಸಂದರ್ಭ ದಂತದ ತಿವಿತಕ್ಕೆ ಒಳಗಾದ ಕಾಡೆಮ್ಮೆಯ ಕಳೇಬರವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸುಟ್ಟು ಹಾಕಲಾಯಿತು.
ಈ ಭಾಗದಲ್ಲಿ ಕಾಡಾನೆ ಮತ್ತು ಕಾಡೆಮ್ಮೆಗಳ ಹಾವಳಿ ಮಿತಿಮೀರಿದ್ದು, ರೈತರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.