ಗೋಣಿಕೊಪ್ಪಲು, ಮಾ. 23: ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ರೂ. 50 ಸಾವಿರ ಮೌಲ್ಯದ ಆಟಿಕೆಯನ್ನು ಇತ್ತೀಚೆಗೆ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ದಿಲ್ಲನ್ ಚಂಗಪ್ಪ ಅವರು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಲು, ದೈಹಿಕ ಬೆಳವಣಿಗೆಗಾಗಿ ರೋಟರಿ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಆರ್. ಶಶಿಕಲಾ ಅವರು ರೋಟರಿ ಸಂಸ್ಥೆ, ದಾನಿಗಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಮತ್ತು ಪದಾಧಿಕಾರಿಗಳ ಸಹಕಾರವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಖಜಾಂಚಿ ಎಂ.ಪಿ. ಪ್ರಮೋದ್ ಕಾಮತ್, ಕಾನೂನು ಸಲಹೆಗಾರರಾದ ವಕೀಲ ಸಂಜೀವ ನಾಯರ್, ವಕೀಲ ನವೀನ್, ಸದಸ್ಯರಾದ ಎಂ.ಜಿ. ನಾಗರಾಜ್, ಎಂ.ಜಿ. ನಾರಾಯಣ, ರೋಟರಿ ಸಂಸ್ಥೆಯ ರಾಜಶೇಖರ್, ಶಶಿ ಉತ್ತಪ್ಪ, ಕಾವೇರಪ್ಪ, ಗಣಪತಿ, ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.