ಶನಿವಾರಸಂತೆ, ಮಾ. 23: ಯಸಳೂರು ಹೋಬಳಿಯ ಹನಸೆ ಗ್ರಾಮದ ಶ್ರೀ ಬಸವೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಸಮಾರಂಭ ತಾ. 25 ರಿಂದ 29 ರವರೆಗೆ ನಡೆಯಲಿದೆ. ತಾ. 25 ರಂದು ಬೆಳಿಗ್ಗೆ 8 ಗಂಟೆಗೆ ಶುದ್ಧಿ ಪುಣ್ಯಾಹ, ಗ್ರಾಮ ದೇವರ ಪ್ರಾರ್ಥನೆ, ಮಹಾಪೂಜೆ ಮತ್ತು ಸ್ಥಂಭ ಮುಹೂರ್ತ. ತಾ. 27 ರಂದು ಬೆಳಿಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ನಾಂದಿಹೋಮ, ಅಂಕುರಾರ್ಪಣೆ, ಪಂಚಗವ್ಯ ಪೂಜೆ, ಗಣಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಿದೆ.
ತಾ. 28 ರಂದು ಬೆಳಿಗ್ಗೆ 8 ಗಂಟೆಗೆ 108 ಕಲಶ ಪ್ರತಿಷ್ಠಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಿದೆ. ಸಂಜೆ 6 ಗಂಟೆಗೆ ವಾಸ್ತು ಹೋಮ, ವಾಸ್ತು ಬಲಿ, ಅಘೋರಶಾಸ್ತ್ರ ಹೋಮ, ಶಯ್ಯಾಧಿವಾಸ ಪೂಜೆ ಹಾಗೂ ದೀಪಾರಾಧನೆ ನಡೆಯಲಿದೆ.
ತಾ. 29 ರಂದು ಬೆಳಿಗ್ಗೆ 6.30 ರಿಂದ 7.30 ರೊಳಗೆ ಮಹಾಗಣಪತಿ ಹಾಗೂ ಬಸವೇಶ್ವರ ದೇವರ ಪ್ರತಿಷ್ಠಾಪನೆ, ಬ್ರಹ್ಮಕಲಶ ಪ್ರತಿಷ್ಠಾಪನಾ ಹೋಮ, ಅಭಿಷೇಕ, ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಾಸನ ಶಾಖಾ ಮಠದ ಶಂಭುನಾಥ ಮಹಾಸ್ವಾಮೀಜಿ ಕಲಶ ಉದ್ಘಾಟಿಸಿ ಸಾನಿಧ್ಯ ವಹಿಸಲಿದ್ದಾರೆ.
ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಹೆಚ್.ಬಿ. ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ, ವಿಶೇಷ ಆಹ್ವಾನಿತ ಹೈಕೋರ್ಟ್ ನ್ಯಾಯಾಧೀಶ ಹೆಚ್.ಪಿ. ಸಂದೇಶ್ ಹಾಗೂ ಸಾಧಕರಿಗೆ ನಾಗರಿಕ ಸನ್ಮಾನವಿದೆ. ಹಾಸನದ ಪ್ರೊ. ಹೆಚ್.ಎಲ್. ಮಲ್ಲೇಶ್‍ಗೌಡ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ದೇವಸ್ಥಾನ ಕಾರ್ಯಕಾರಿ ಮಂಡಳಿ ಪ್ರಕಟಣೆ ತಿಳಿಸಿದೆ.