ಗೋಣಿಕೊಪ್ಪ ವರದಿ, ಮಾ. 23: ಬಿ. ಶೆಟ್ಟಿಗೇರಿ ಗ್ರಾಮದ ಕೊಂಗಣ-ಕುತ್ತ್‍ನಾಡ್ ಸೂಫಿ ಸಹೀದ್ ಅವರ ಉರೂಸ್ ತಾ. 25 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8.30 ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಹಾಲು - ಅನ್ನ ವಿತರಣೆ, ಭಂಡಾರ ಇಡುವ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪ ನಂದಾಜಿ, ತಕ್ಕ ಮುಖ್ಯಸ್ಥರುಗಳಾದ ಕರ್ತೂರ ದೇವಯ್ಯ, ಅಲೀರ ಚೇಕು ಹಾಜಿ, ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಮೇರ ದಾದಾ, ಸ್ಥಳೀಯ ಪ್ರಮುಖರುಗಳಾದ ಆಲೀರ ಮಹಮ್ಮದ್, ತೀತಿಮಾಡ ಗಣೇಶ್, ಯಾಕೂಬ್ ಮಾಸ್ಟರ್, ಕಡೇಮಾಡ ಅಶೋಕ್ ಚಿಟ್ಯಪ್ಪ, ಸಂಶುದ್ದೀನ್ ಝೈನಿ ಪಾಲ್ಗೊಳ್ಳಲಿದ್ದಾರೆ.