ಮಡಿಕೇರಿ, ಮಾ. 23: ಇಲ್ಲಿನ ಹಿಲ್ ರೋಡ್‍ನಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಲಾಗುವ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ 3 ದಿನಗಳ ಕಾಲ ಉಚಿತ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಕರಕುಶಲ, ಯೋಗ, ನಿರೂಪಣೆ, ಬರವಣಿಗೆ, ನೃತ್ಯ ತರಬೇತಿ ನೀಡಲಾಗುವದು.
4ರಿಂದ 14 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದ್ದು, ಮೊದಲು ಬರುವ 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತಾ. 28ರಿಂದ 30ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 9663326204 ಅನ್ನು ಸಂಪರ್ಕಿಸಬಹುದಾಗಿದೆ.