ನಾಪೆÇೀಕ್ಲು, ಮಾ. 23: ಮನುಷ್ಯನಿಗೆ ಆತ್ಮವಿಶ್ವಾಸ ಅಗತ್ಯ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ವಿಶ್ವಾಸ ಮತ್ತು ಧೃಡತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆ ಯ ವತಿಯಿಂದ ಆಯೋಜಿಸಲಾಗಿದ್ದ ಎನಲೈಜ್ó ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣಕ್ಕೆ ಶಿಸ್ತು ಮುಖ್ಯ. ಕೆಲವು ಚಿಂತನೆಗಳನ್ನು ಮಾಡುವದರ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಯಾರಲ್ಲಿಯೂ ದುರಾಭಿಮಾನ ವಿರಬಾರದು. ಎಲ್ಲರೂ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಅದು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಹೈಕೋರ್ಟ್ ವಕೀಲ ಹಿದಾಯುತ್ತುಲ್ಲಾ, ವಕೀಲ ವೃತ್ತಿಯನ್ನು ಪ್ರಾಮಾಣಿಕವಾಗಿ ಸತ್ಯಸಂಧತೆಯಿಂದ ನಡೆಸಬೇಕು. ನಮ್ಮಲ್ಲಿರುವ ಸಾಮಥ್ರ್ಯವನ್ನು ನಾವು ಅರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮರ್ಕಝ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್ ಮುಸ್ಲಿಯಾರ್, ಇಸ್ಮಾಯಿಲ್ ಸಖಾಫಿ ಉಸ್ತಾದ್, ಯಾಕುಬ್ ಮಾಸ್ಟರ್ ಮಾತನಾಡಿದರು. ವೇದಿಕೆಯಲ್ಲಿ ಶಿಯಾಬುದ್ದೀನ್ ನುರಾನಿ, ಯೂಸಫ್ ಕೊಂಡಂಗೇರಿ, ಅಬ್ದುಲ್ಲಾ ಸಾಹೇಬ್, ಮೈದುಕುಟ್ಟಿ ಹಾಜಿ, ಅದಪೆÉÇಳೆ ಮಹಮ್ಮದ್ ಹಾಜಿ, ಅಬ್ದುಲ್ಲ ಹಾಜಿ, ಸೈಯ್ಯದ್ ಎಲಿಯಾಸ್, ಕೂವೆಂಡ ಆಲಿ, ಉಮರುಲ್ ಫಾರುಕ್, ಮತ್ತಿತರರು ಇದ್ದರು. ಮಹಮದ್ ಶಮೀರ್ ಸ್ವಾಗತಿಸಿ, ಫಾರೂಕ್ ಅಹಮದ್ ವಂದಿಸಿದರು.