ಮಡಿಕೇರಿ ಮಾ. 21: ಕಾಂಗ್ರೆಸ್ ಪಕ್ಷದ ‘ಶಕ್ತಿ’ ಮತ್ತು ‘ಒಂದು ಮನೆ ಒಂದು ಮತ’ ಕಾರ್ಯಕ್ರಮದ ಕೊಡಗು ಜಿಲ್ಲಾ ಉಸ್ತುವಾರಿಯನ್ನಾಗಿ ಸೂರಜ್ ಹೊಸೂರು ಅವರನ್ನು ನೇಮಕ ಮಾಡಲಾಗಿದೆ.
ಈ ಕಾರ್ಯಕ್ರಮದ ನಾಪೋಕ್ಲು ಬ್ಲಾಕ್ ಅಧ್ಯಕ್ಷರಾಗಿ ಕೆ.ಎನ್. ರಾಘವೇಂದ್ರ, ಮಡಿಕೇರಿ ಬ್ಲಾಕ್ ಅಧ್ಯಕ್ಷರಾಗಿ ರಾಹುಲ್ ಮಾರ್ಷಲ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷರಾಗಿ ಬಿ.ಎಸ್. ಆನಂದ್, ಕುಶಾಲನಗರ ಬ್ಲಾಕ್ ಅಧ್ಯಕ್ಷರಾಗಿ ವಿ.ಜೆ. ನವೀನ್, ಪೊನ್ನಂಪೇಟೆ ಅಧ್ಯಕ್ಷರಾಗಿ ಸೋಮಣ್ಣ ಜಮಂದ ಹಾಗೂ ವೀರಾಜಪೇಟೆ ಬ್ಲಾಕ್ ಅಧ್ಯಕ್ಷರಾಗಿ ಅತೀಫ್ ಮನ್ನ ಅವರನ್ನು ನೇಮಿಸಲಾಗಿದೆ.