ಮಡಿಕೇರಿ, ಮಾ. 21: ಇಲ್ಲಿನ ಸುಬ್ರಹ್ಮಣ್ಯ ಹಾಗೂ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠಾಪನ ಮತ್ತು ದೈವಕೋಲಗಳ ವಾರ್ಷಿಕ ಉತ್ಸವವು ಏಪ್ರಿಲ್ 1 ರಿಂದ ಏಪ್ರಿಲ್ 6 ರವರಗೆ ನಡೆಯಲಿದೆ. ಮಡಿಕೇರಿ ನಗರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಹಾಗೂ ಮುತ್ತಪ್ಪ ಸ್ವಾಮಿ ಕ್ಷೇತ್ರದ ಪುನರ್ ಪ್ರತಿಷ್ಠಾಪನ ಮತ್ತು ದೈವಕೋಲಗಳ ವಾರ್ಷಿಕ ಉತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಶ್ರೀ ಮುತ್ತಪ್ಪ ಜಾತ್ರೆಯ ಯಶಸ್ವಿ ಆಚರಣೆಗೆ ರೂಪುರೇಷೆಗಳನ್ನು ಸಿದ್ದಪಡಿಸಿದರು ಎಂದು ಪ್ರಕಟಣೆ ತಿಳಿಸಿದೆ.