ಸಿದ್ದಾಪುರ, ಮಾ.21: ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಮೈದಾನ ಕಾಮಗಾರಿಗೆ ಭೂಮಿಪೂಜೆ ನಡೆಯಿತು. ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಕೊಡಗು ಚಾಂಪಿಯನ್ಸ್ ಲೀಗ್ ಎಂಬ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ನಾಲ್ಕನೇ ಆವೃತಿಯ ಪಂದ್ಯಾಟವನ್ನು ಸಿದ್ದಾಪುರದ ಕರಡಿಗೋಡುವಿನ ಕುಕ್ಕುನೂರು ದಿವಂಗತ ಬಾಲಕೃಷ್ಣ ಹಾಗೂ ದಿವಂಗತ ಚೇತನ್ ಜ್ಞಾಪಕಾರ್ಥ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಮೈದಾನದ ಮಾಲೀಕರಾದ ಕುಕ್ಕುನೂರು ಪಿ.ಪುರುಷೋತ್ತಮ ಹಾಗೂ ಪ್ರಕಾಶ್ ಮೈದಾನದ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು.

ಕೆ.ಸಿ.ಎಲ್ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಈ ಬಾರಿ ಮೈದಾನವನ್ನು ಮತ್ತಷ್ಟು ಗುಣಮಟ್ಟದಿಂದ ನಿರ್ಮಾಣ ಮಾಡಲು ಈಗಾಗಲೇ ಭೂಮಿಪೂಜೆ ನೆರವೇರಿಸಿದ್ದು, ಜೆ.ಸಿ.ಬಿ ಬಳಸಿ ಮೈದಾನ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದರು.

ಈ ಸಂದರ್ಭ ಕೆ.ಸಿ.ಎಲ್‍ನ ಹಿತೈಷಿ ಕುಕ್ಕುನೂರು ಸುನಿಲ್, ಮೈದಾನದ ಮಾಲೀಕರಾದ ದಮಯಂತಿ, ಕವಿತಾ, ಪ್ರಮುಖರಾದ ಕುಕ್ಕುನೂರು ಚಂದ್ರಶೇಖರ್, ಶಾ ಇವೆಂಟ್ಸ್ ಮಾಲೀಕ ಶಾಫಿ, ಕೆ.ಸಿ.ಎಲ್ ಪದಾಧಿಕಾರಿಗಳಾದ ಮುಬಾರಕ್, ಎ.ಎಸ್ ಮುಸ್ತಫ, ಶಾಹುಲ್, ಎಂ.ಎ ಅಜೀಜ್, ರತೀಶ್, ಅನೀಶ್, ಅಫ್ಸಲ್, ಶಫೀರ್, ರವಿ, ನಿಜಾಮ್, ಧರ್ಮರಾಜ್, ರಾಶಿದ್ ಸೇರಿದಂತೆ ಇನ್ನಿತರರು ಇದ್ದರು. ಕೆ.ಸಿ.ಎಲ್ ಪಂದ್ಯಾವಳಿ ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಲಿದೆ.