ಮಡಿಕೇರಿ, ಮಾ. 22: ಮರಗೋಡಿನ ಭಾರತಿ ಹೈಸ್ಕೂಲ್ ಎಜುಕೇಶನ್ ಸೊಸೈಟಿ ಹಾಗೂ ಭಾರತಿ ಜೂನಿಯರ್ ಕಾಲೇಜಿನ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಅವಿರೋಧ ಆಯ್ಕೆಗೊಂಡರು. ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕಟ್ಟೇಮನೆ ಸೋನ, ಉಪಾಧ್ಯಕ್ಷರಾಗಿ ಕೋಚನ ಲವಿನ್, ಕಾರ್ಯದರ್ಶಿ ಯಾಗಿ ಬಡುವಂಡ್ರ ದುಶ್ಯಂತ್, ಖಜಾಂಚಿಯಾಗಿ ಪರಿಚನ ಶರತ್, ನಿರ್ದೇಶಕರಾಗಿ ಕೋಚನ ಅನೂಪ್ ಮತ್ತು ಪಾರೆರ ಯತೀಶ ಆಯ್ಕೆಗೊಂಡಿದ್ದಾರೆ.

ಕಳೆದ 22 ವರ್ಷ ಕಾಲ ಅಧ್ಯಕ್ಷರಾಗಿದ್ದ ಬಲ್ಲಚಂಡ ಕಾವೇರಪ್ಪ ಮತ್ತು ಆಡಳಿತ ಮಂಡಳಿಯವರು ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು. ಹಿಂದಿನ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶು ಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರ ಸೋನ ಅವರು, ಮರಗೋಡಿನ ಭಾರತಿ ಪ್ರೌಢಶಾಲೆ ಪ್ರಾರಂಭಗೊಂಡು 55 ವರ್ಷಗ ಳಾಗಿದ್ದು, ಇಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಉತ್ತಮ ಶಿಕ್ಷಣ ಪಡೆದ್ದಿದ್ದಾರೆ. ಈಗಲೂ ಇಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಕರು ಇರುವದಾಗಿ ತಿಳಿಸಿದರು.

ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿನಿಯರಿಗೆ ಸುಸಜ್ಜಿತ ವಸತಿ ನಿಲಯ ಇದ್ದು, ಇದರ ಸದುಪ ಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳುವಂತೆ ಕೇಳಿಕೊಂಡರು. ಪ್ರಸಕ್ತ ಸಾಲಿನಲ್ಲಿ ಮರಗೋಡಿನ ಸುತ್ತಮುತ್ತ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಶಾಲಾ ಬಸ್ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.