ಮಡಿಕೇರಿ, ಮಾ. 22: ಎನ್. ಡಿ.ಆರ್.ಎಫ್. ಮಾರ್ಗಸೂಚಿ ಯಂತೆ ಕೈಗೊಂಡ ಸಮೀಕ್ಷೆಯನ್ವಯ 550 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಕಳೆದ ಅತಿವೃಷ್ಟಿಯ ಭೂಕುಸಿತ ದಿಂದ ಪೂರ್ಣ ನಾಶಗೊಂಡಿದೆ. ಅಲ್ಲದೆ, 30,000 ಹೆಕ್ಟೇರ್ ಪ್ರದೇಶ ಇತ್ತೀಚಿಗಿನ ಮಳೆಯಿಂದ ದುಷ್ಪರಿಣಾಮಕ್ಕೀಡಾಗಿದೆ ಎಂದು ಬೆಂಗಳೂರು ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ನಿರ್ದೇಶಕರಾದ ವೈ. ರಘುರಾಮುಲು ವಿವರಿಸಿದ್ದಾರೆ. ಇತ್ತೀಚೆಗೆ ಚೆಟ್ಟಳ್ಳಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ದುಷ್ಪರಿಣಾಮದ ಪುನರುಜ್ಜೀವನ ಪರಿಹಾರ ಸೂತ್ರ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರ ಹಾಗೂ ಕೊಡಗು ಕಾಫಿ ಬೆಳೆÉಗಾರರ ಸಂಸ್ಥೆ (ಸಿಪಿಎ) ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈಗಾಗಲೇ ಕೇಂದ್ರ ಸಚಿವಾಲ ಯಕ್ಕೆ ಕಾಫಿ ಬೆಳೆ ಪುನರುತ್ಥಾನಕ್ಕಾಗಿ ವಿಶೇಷ ಪ್ಯಾಕೇಜ್ ಒಂದನ್ನು ತಯಾರಿಸಿ ಮಂಜೂರಾತಿಗಾಗಿ ಕಾಫಿ ಮಂಡಳಿಯಿಂದ ಕಳುಹಿಸಲಾಗಿದೆ. ಈ ಪ್ಯಾಕೇಜ್ ಅನ್ವಯ ಮುಂದಿನ 6 ವರ್ಷಗಳÀಲ್ಲಿ ಕಾಫಿ ಬೆಳೆಗಾರರಿಗೆ ಎಲ್ಲ ವಿಭಾಗಗಳಲ್ಲಿ ಶೆ. 60 ರಿಯಾಯಿತಿ ಒದಗಿಸಬೇಕು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸಿ ಅದಕ್ಕೆ ಪೂರಕವಾದ ತಂತ್ರಜ್ಞಾನವನ್ನು ಉನ್ನತೀಕರಣಗೊಳಿಸಬೇಕು ಎಂದು ರಘುರಾಮುಲು ಅಭಿಪ್ರಾಯಪಟ್ಟರು.ಸಭಾಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿಗಳಾದ ಡಾ. ಪಿ.ಜಿ. ಚೆಂಗಪ್ಪ ಅವರು ಮಾತನಾಡಿ ಕಾಫಿ ಬೆಳೆಗಾರರ ಸ್ಥಿತಿ ಒಂದೆಡೆ ಸ್ಥಗಿತಗೊಂಡಿದ್ದು, ಮತ್ತೊಂದೆಡೆ ಕ್ಷೀಣಗೊಳ್ಳುತ್ತಿದೆ ಎಂದು ವಿಷಾದಿಸಿದರು. ಈ ಬಗ್ಗೆ ಪುನರುತ್ಥಾನದ ಅಗತ್ಯತೆ ಇದೆ ಎಂದು ಜ್ಞಾಪಿಸಿದರು.
ಕಾಫಿ ಮಂಡಳಿ ಸಂಶೋಧನಾ ವಿಭಾಗದ ಸಹ ನಿರ್ದೇಶಕರಾದ
ಡಾ. ಸೂರ್ಯ ಪ್ರಕಾಶ್ ಅವರು ಮಾತನಾಡಿ ರೋಬಸ್ಟಾ ಬೆಳÉಯನ್ನು ಅಬೀಜ ಮಾದರಿಯಲ್ಲಿ ಬೆಳೆಸಲು ಹಾಗೂ ಆ ಮೂಲಕ ಹೆಚ್ಚಿನ ಫಸಲು ಪಡೆಯಲು ಈಗಾಗಲೇ ಸಂಶೋಧಿಸ ಲಾಗಿದೆ. ಕೆಲವರು ಈ ವಿಧಾನದಲ್ಲಿ ಬೆಳೆಸಿ ಅತ್ಯುತ್ತಮ ಫಸಲು ಪಡೆದಿದ್ದಾರೆ. ಇದನ್ನು ಹೆಚಿÀ್ಚಗೆ ಅನುಸರಿಸುವಂತಾಗಲಿ ಎಂದು ಹಾರೈಸಿದರು.
ಸಭೆಯಲ್ಲಿ ಅನೇಕ ಬೆಳೆಗಾರರು ಕಾಫಿ (ಮೊದಲ ಪುಟದಿಂದ) ಬೆಳೆಯಲ್ಲಿನ ಸಮಸ್ಯೆಗಳು,ಅನುಭವಗಳು, ನಷ್ಟದ ಪ್ರಮಾಣಗಳ ಬಗ್ಗೆ ಬೆಳಕು ಚೆಲ್ಲಿದರು. ಅನೇಕ ಪ್ರದೇಶಗಳಲ್ಲಿ ಮಣ್ಣಿನ ಮೇಲ್ಪದರ ಜಾರಿ ಹೋಗಿದ್ದು, ಸತ್ವವೂ ಕುಸಿತಗೊಂಡ ಬಗ್ಗೆ ಮಾಹಿತಿಯಿತ್ತರು. ಇದನ್ನು ಪುನರ್ನಿರ್ಮಾಣಗೊಳಿಸುವ ಕುರಿತು ಚರ್ಚಿಸಲಾಯಿತು. ಅಲ್ಲದೆ, ಅನೇಕ ಬೆಳೆಗಾರರು ತಮ್ಮ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಭೂಕುಸಿತದಲ್ಲಿ ನಾಶಗೊಂಡ ಕಾಫಿ ಬೆಳೆಯನ್ನು ಮತ್ತೆ ಮರು ಬೆಳೆ ಮೂಲಕ ಪುನರುತ್ಥಾನಗೊಳಿಸಲು ಎಂದಿನಿಂದ ಕೆಲಸ ಆರಂಭಿಸಬೇಕು ಎಂಬ ಪ್ರಶ್ನೆಯನ್ನು ಸಭೆಯ ಮುಂದಿಟ್ಟರು.
ಇಂತಹ ಪ್ರದೇಶUಳಲ್ಲಿ ಮೊದಲು ಹೊಸದಾಗಿ ನೆರಳು ನೀಡುವ ಗಿಡಗಳನ್ನು ಬೆಳೆಸಬೇಕು. ಬಳಿಕವಷ್ಟೇ ಕಾಫಿ ಗಿಡ ಮರು ನೆಡುವಿಕೆ ಆರಂಭಿಸಬೇಕು. ಈ ಕಾರ್ಯಕ್ಕೆ ಅತೀವ ವೆಚ್ಚ ತಗುಲುತ್ತದೆ. ಎಂದು ಸಾಮೂಹಿಕ ಅಭಿಪ್ರಾಯ ವ್ಯಕ್ತಗೊಂಡಿತು. ಈ ಹಿನ್ನೆಲೆಯಲ್ಲಿ ಸರಕಾರವು ಭೂ ಕುಸಿತದಿಂದ ಕಾಫಿ ನಾಶಗೊಂಡ ಪ್ರದೇಶಗಳಲ್ಲಿ ಕಾಫಿ ತೋಟದ ಪುನರ್ನಿರ್ಮಾಣಕ್ಕಾಗಿ ಹೆಕ್ಟೇರ್ ಒಂದಕ್ಕೆ ರೂ. 30 ಲಕ್ಷ ಒದಗಿಸಬೇಕೆಂದು ಕೋರಲು ನಿರ್ಣಯಿಸಲಾಯಿತು. ಹಾಸನ ಕಾಫಿ ಮಂಡಳಿ ಉಪವಿಭಾಗದ ವಿಸ್ತರಣಾ ಜಂಟಿ ನಿರ್ದೇಶಕ ವಿ ಆರ್. ಗುಡ್ಡೇಗೌಡ ಸ್ವಾಗತಿಸಿದರು.